ಕರಾವಳಿ

ಬೈಂದೂರು: ಅಕ್ಷತಾ ದೇವಾಡಿಗ ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ( News-Photos Updated)

Pinterest LinkedIn Tumblr

akshatha-sunil

ಕೊಲೆಗೀಡಾದ ಅಕ್ಷತಾ ದೇವಾಡಿಗ ಹಾಗು ಕೊಲೆಗಡುಕ ಸುನಿಲ್ 

ಕುಂದಾಪುರ: ಬೈಂದೂರಿನ ಹೇನಬೇರು ನಿವಾಸಿ ಅಕ್ಷತಾ ದೇವಾಡಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರ ತಂಡ ಬಂಧಿಸಿದೆ.

ಬೈಂದೂರಿನ ಯೋಜನಾ ನಗರದ ನಿವಾಸಿಗಳಾದ ಸುನೀಲ್(19) ಹಾಗೂ ಈತನ ಚಿಕ್ಕಮ್ಮನ ಮಗನಾದ (ಸೋದರ) ಅಕ್ಷಯ್ (18) ಎನ್ನುವವರೇ ಅಕ್ಷತಾ ಕೊಲೆಯಲ್ಲಿ ಬಂಧಿತರಾದ ಆರೋಪಿಗಳಾಗಿದ್ದಾರೆ.

sunil1

IMG-20150620-WA0003

IMG-20150620-WA0005

IMG-20150620-WA0014

ನಡೆದಿದ್ದೇನು?: ಹೆಣ್ಣುಮಕ್ಕಳನ್ನು ಚುಡಾಯಿಸುವ ದುರ್ಗುಣವನ್ನು ಬೆಳೆಸಿಕೊಂಡಿದ್ದ ಸುನೀಲ ಹಾಗೂ ಅಕ್ಷಯ್ ದೊಡ್ಡಮ್ಮ-ಚಿಕ್ಕಮ್ಮನ ಮಕ್ಕಳಾಗಿದ್ದಾರೆ. ಸುನೀಲ್ ದ್ವಿತೀಯ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದು ಅಕ್ಷಯ್ ದ್ವಿತೀಯ ಪಿಯುಸಿ ಮುಗಿಸಿ ಅಂಕದಕಟ್ಟೆಯ ಐಟಿಈ ಸೇರಲು ಹೊರಟವನಾಗಿದ್ದ. ಅಂದು ಬುಧವಾರವೂ ಕೂಡ ಈಕೆಯ ಕಾಲೇಜು ಬಳಿ ಪೋಲಿ ಅಲೆಯುತ್ತಿದ್ದ ಇವರಿಬ್ಬರು ಒತ್ತಿನೆಣೆ ಗುಡ್ಡದವರೆಗೂ ಆಕೆಯನ್ನು ಹಿಂಬಾಲಿಸಿದ್ದಾರೆ. ಅಲ್ಲಿ ಆಕೆಯನ್ನು ಸುನೀಲನೊಬನೇ ಹಿಂಬಾಲಿಸಿ ಆಕೆಗೆ ಕಿರುಕುಳ ನೀಡಿದ್ದು ಆಕೆ ಕೊಸರಾಡಿದಾಗ ಆಕೆಯ ದುಪ್ಪಟ್ಟವನ್ನು ಕುತ್ತಿಗೆಗೆ ಬಿಗಿದಿದ್ದಾನೆ. ಇದರಿಂದ ಆಕೆಯ ಉಸ್ರು ನಿಂತಿದ್ದು ಆಕೆಯ ಶವವನ್ನು ಕೊಂಡುಹೋಗಿ ಪೊದೆಯಲ್ಲಿ ಎಸೆದಿದ್ದಾನೆ.

Byndoor murder in byndoor protest_June 20_2015-001

Byndoor murder in byndoor protest_June 20_2015-002

Byndoor murder in byndoor protest_June 20_2015-003

Byndoor murder in byndoor protest_June 20_2015-004

Byndoor murder in byndoor protest_June 20_2015-005

Byndoor murder in byndoor protest_June 20_2015-006

Byndoor murder in byndoor protest_June 20_2015-007

ಸತ್ತವಳ ಮೇಲೆ ಮಲಗಿದ ಕಾಮುಕ: ಅಕ್ಷತಾ ಸತ್ತಿದ್ದನ್ನು ಗಮನಿಸದ ಸುನೀಲ್ ಆಕೆಯ ಶವದ ಮೇಲೆಯೇ ಮಲಗಿ ಆಕೆಯನ್ನು ಚುಂಬಿಸಿದ್ದನಂತೆ. ಕೊನೆಗೆ ಆಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ತಿಳಿದಾಗ ಆಕೆಯ ಶವವನ್ನು ಅಲ್ಲಿಯೇ ಎಸೆದು ಪರಾರಿಯಾಗಿದ್ದನಂತೆ.

ಅಕ್ಷಯನ ಪಾತ್ರ ನಿಗೂಢ: ಪ್ರಕರಣದಲ್ಲಿ ಅಕ್ಷಯನು ಈತನಿಗೆ ಸಹಕರ್ಸಿದ ಆರೋಪವನ್ನು ಹೊತ್ತಿದ್ದು, ಆತ ಈ ಪ್ರಕರಣದಲ್ಲಿ ಯಾವ ಪಾತ್ರ ವಹಿಸಿದ್ದನೆಂಬುದನ್ನು ಪೊಲೀಸರು ಇನ್ನಷ್ಟೇ ಹೇಳಬೇಕಿದೆ.

Write A Comment