ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿಗೆ 3 ವರ್ಷಗಳ ಅವದಿಗೆ ಪಧಾಧಿಕಾರಿಗಳ ಆಯ್ಕೆಯು SDPI ರಾಷ್ಟ್ರೀಯ ಸೆಕ್ರೆಟರಿಯೇಟ್ ಸದಸ್ಯರಾದ ಜನಾಬ್ ಮೊಯ್ದೀನ್ ಕುಟ್ಟಿ ಪೈಝಿಯವರ ಉಪಸ್ಥಿತಿಯಲ್ಲಿ ರಿಯಾದಿನಲ್ಲಿ ನಡೆಯಿತು . ರಾಜ್ಯಾಧ್ಯಕ್ಷರಾಗಿ ಸಮೀರ್ ಮೊಹಮ್ಮದ್ ಎರ್ಮಾಲ್ ,ಉಪಾಧ್ಯಕ್ಷರಾಗಿ ಮುಸ್ತಾಕ್ ಖಾಸಿಂ ಎರ್ಮಾಲ್ , ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್ ಕಬಕ ,ಕಾರ್ಯದರ್ಶಿಯಾಗಿ ಅಬ್ದುಲ್ ಅಜೀಜ್ ಬನ್ಕಲ್ ಆಯ್ಕೆಯಾದರು . ರಾಜ್ಯಸಮಿತಿ ಸದಸ್ಯರುಗಳಾಗಿ ಹಾರಿಸ್ ಸುರತ್ಕಲ್ , ಮುದಸ್ಸೀರ್ ಚಿತ್ರದುರ್ಗ, ಉಸ್ಮಾನ್ ಕುಂಜತೂರ್ , ಅಬ್ದುಲ್ ಖಾದರ್ ಕೊಜಾಮಾ , ಸಿದ್ಧೀಕ್ ಮಡಿಕೇರಿ , ಇಸ್ಮಾಯಿಲ್ ಮಂಗಳಪೇಟೆ , ಯಾಕೂಬ್ ಸೂರಿಂಜೆ , ಸಿರಾಜ್ ಸಜಿಪ , ಯಾಕೂಬ್ ಫೈರೋಜ್ , ಹಾಗೂ ರಫೀಕ್ ಸಾಣೂರ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮೊಯ್ದೀನ್ ಕುಟ್ಟಿ ಪೈಝಿಯವರು ಪ್ರಸಕ್ತ ಭಾರತದರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಾ , ಪರ್ಯಾಯ ರಾಜಕೀಯ ಶಕ್ತಿಗಳ ಬೆಳವಣಿಗೆಯಲ್ಲಿ ಅನಿವಾಸಿ ಭಾರತೀಯರು ವಹಿಸಬೇಕಾದ ಪಾತ್ರವನ್ನು ಒತ್ತಿ ಹೇಳಿದರು, ಮತ್ತು ನೂತನ ರಾಜ್ಯಸಮಿತಿ ಪದಾಧಿಕಾರಿಗಳಿಗೆ ಶುಭಕೋರಿದರು.ಕೇಂದ್ರ ಸಮಿತಿ ಅಧ್ಯಕ್ಷರಾದ ಜನಾಬ್! ಕೋಯ , ಪ್ರಧಾನ ಕಾರ್ಯದರ್ಶಿಗಳಾದ ಬಶೀರ್ ಇಂಗಾಪುಝ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶರೀಫ್ ಕಬಕ ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದಗೈದರು.