ಕರಾವಳಿ

ಸರ್ಕಾರಿ ಶಾಲೆಗಳ ಉಳಿಸುವಿಕೆಯಲ್ಲಿ ಸಮಾಜದ ಸರ್ವೋತೊಮುಖ ಬೆಳವಣಿಗೆ: ಡಾ. ಹಯವದನ ಉಪಾಧ್ಯ

Pinterest LinkedIn Tumblr

1

ಭಂಡಾರ್ ಕಾರ್ಸ್ ಕಾಲೇಜಿನ ಆಂಗ್ಲಭಾಷ ಪ್ರಾಧ್ಯಾಪಕರಾದ ಡಾ. ಎಸ್ ಹಯವದನ ಉಪಾಧ್ಯ ಇವರು ಹಿರಿಯಡಕದ ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ನ 23ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತ, ಸರಕಾರೀ ಸವಲತ್ತು ಹಾಗು ಸಾರ್ವಜನಿಕರ ಸಹಕಾರದೊಂದಿಗೆ ಎಲ್ಲ ಸರಕಾರೀ ಶಾಲೆಗಳ ಉಳಿಸುವಿಕೆ ಆಗಬೇಕಿದೆ. ಎಲ್ಲವರ್ಗದ ಜನರ ಸರ್ವತೋಮುಖ ಬೆಳವಣಿಗೆ ಹಾಗು ಉಳಿವಿಗಾಗಿ ಸಂಘಟನೆಗಳು ತಮ್ಮ ಪ್ರದೇಶದ ಶಾಲೆ ಹಾಗು ಆಸ್ಪತ್ರೆಗಳ ಅಭಿವೃದ್ದಿಗಾಗಿ ಕೈಜೋಡಿಸುವಂತೆ ವಿನಂತಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಅಜೆಕಾರ್ ಪದ್ಮಗೋಪಾಲ್ ಎಜ್ಯ್ಕೇಶನೆ ಟ್ರಸ್ಟ್ ನ ಶ್ರೀ ಸುಧಾಕರ ಶೆಟ್ಟಿ ಮಾತನಾಡುತ್ತ ಸಮಾಜದ ಅನಿಷ್ಟಗಳಾದ ಮಧ್ಯಪಾನ ಇತ್ಯಾದಿಗಳನ್ನು ಕೊನೆಗೊಳಿಸುವಂತೆ ಕರೆನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚನಬೆಟ್ಟು ವಿಧ್ಯವರ್ಧಕ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ರಮೇಶ್ ಶೇರ್ವೇಗಾರ್ ಇವರು ಸಂವಿದಾನವನ್ನು ಅರಿತು, ಗೌರವಿಸುವಂತೆ ಯುವಕರಿಗೆ ಕರೆನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿಧ್ಯಾನಿಲಯದ ಬಿ.ಎ ಪದವಿಯಲ್ಲಿ 2ನೇ ರಾಂಕ್ ಗಳಿಸಿದ ಹಿರಿಯಡಕ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿನಿ ಕು|ರಾಧಿಕ ಹಾಗು ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಶ್ರೀಮತಿ ಅಮೃತಾ ಎಸ್. ಪೂಜಾರಿ, ಮಾ|ಆಶ್ರಿತ್ ಮತ್ತು ಕು| ಆಕಾಂಕ್ಷ ಇವರುಗಳನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ದಿವಾಕರ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ದೇವದಾಸ ಮರಾಟೆ ವರದಿ ವಾಚಿಸಿ, ರಾಮಚಂದ್ರ ನಾಯಕ್ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ಗುರುನಾಥ ಶೆಟ್ಟಿ, ಸತ್ಯಪ್ರಸಾದ್, ವಿಶ್ವನಾಥ ಶೆಟ್ಟಿ, ಉದಯ ಶೆಟ್ಟಿ, ಪ್ರವೀಣ್ ಮೊದಲಾದವರು ಸಹಕರಿಸಿದರು. ಬಾಲಕೃಷ್ಣ ಬಿ ಕೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸ್ಥಳೀಯ ಪ್ರತಿಭೆಗಲಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಚೈತನ್ಯ ಕಲಾವಿದರಿಂದ “ಬಲೆ ತೆಲ್ಪಾಲೆ” ಎಂಬ ತುಳು ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಾಯಿತು

Write A Comment