ಕರಾವಳಿ

ಭೂ ವಿಜ್ಞಾನ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ನೇತೃತ್ವದಲ್ಲಿ ಅಕ್ರಮ ಮರಳು ದಕ್ಕೆಗೆ ದಾಳಿ; 19 ಲಾರಿಗಳ ವಶ

Pinterest LinkedIn Tumblr

??????????

ಕುಂದಾಪುರ: ಅಕ್ರಮ ಮರಳುಗಾರಿಕೆ ದಕ್ಕೆಗೆ ಭೂ ವಿಜ್ಞಾನ, ಕಂದಾಯ ಅಧಿಕಾರಿಗಳು ಹಾಗೂ ಕುಂದಾಪುರ ಪೊಲೀಸರು ದಿಡೀರ್ ದಾಳಿ ನಡೆಸಿದ ಘಟನೆ ಕುಂದಾಪುರದ ಆನಗಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೇರಿಕುದ್ರು ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ದಾಳಿ ವೇಳೆ ಮರಳು ತುಂಬಿಸಿಲಾದ 6 ಲಾರಿಗಳು ಹಾಗೂ ಮರಳು ತುಂಬಿಸಲು ನಿಲ್ಲಿಸಲಾದ 13 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಂದಾಪುರದ ಆನಗಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೇರಿಕುದ್ರು ಎಂಬ ಪುಟ್ಟ ಪ್ರದೇಶವು ನಿರಂತರ ಅಕ್ರಮ ಮರಳುಗಾರಿಕೆಯಿಂದಾಗಿ ಬಸವಳಿದು ಹೋಗಿದ್ದು, ನದಿತೀರದಲ್ಲಿರುವ ಹಲವು ಕುಟುಂಬಗಳು ಭೂಮಿ ಮರಳುಗಾರಿಕೆಯಿಂದ ನದಿ ಪಾಲಾಗುವ ಸ್ಥಿತಿ ನಿರ್ಮಾಣಗೊಂಡಿರುವ ಬೆನ್ನಿಗೆ ಸಾರ್ವಜನಿಕರು ಹಾಗೂ ಸ್ಥಳೀಯ ನಾಗರಿಕರು ಸಂಬಂದಪಟ್ಟ ಇಲಾಖೆಗೆ ದೂರನ್ನು ನೀಡಿದ್ದರು.

??????????

??????????

ಕೆಲವು ದಿನಗಳ ಹಿಂದೆ ಕುಂದಾಪುರಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಪ್ರದೇಶಕ್ಕೆ ದಾಳಿ ನಡೆಸಿ 7 ಲಾರಿಗಳನ್ನು ವಶಕ್ಕೆ ಪಡೆಯಲು ಸೂಚಿಸಿ ದಂಡವನ್ನು ವಿಧಿಸಿದ್ದರು. ಆದರೂ ಮರುದಿನದಿಂದಲೇ ಅವ್ಯಹತವಾಗಿ ಮರಳುಗಾರಿಕೆ ಈ ಪ್ರದೇಶದಲ್ಲಿ ಎಗ್ಗಿಲ್ಲದೇ ಸಾಗುತ್ತಿತ್ತು.

ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಭೂವಿಜ್ಞಾನ ಇಲಾಖೆ ಅಧಿಕಾರಿ ಲತಾ ಕುಲಕರ್ಣಿ ನೇತೃತ್ವದಲ್ಲಿ ದಾಳಿ ನಡೆದಿದ್ದು 19 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಕೆ.ಕೆ. ಬಿಲ್ಲವ, ಶಂಬು ಪೂಜಾರಿ, ಗಂಗಾಧರ ಶೆಟ್ಟಿ ಮತ್ತು ಮಂಜುನಾಥ ನಾಯರ್, ಮಂಜುನಾಥ ಪುಜಾರಿ, ದಿನಕರ ಶೆಟ್ಟಿ ಹಾಗೂ ಅಮರನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ನಟರಾಜ (ಮೂವರು ಪಾಲುದಾರರು) ಸೇರಿದ 6 ಮರಳು ದಕ್ಕೆಗಳಿದೆ ಎಂಬ ಮಾಹಿತಿಯಿದೆ.

ದಾಳಿಯ ವೇಳೆ ಕಂದಾಯ ಅಧಿಕಾರಿ ತಿಮ್ಮಪ್ಪ ಶೆಟ್ಟಿಗಾರ್, ಅನಗಳ್ಳಿ ಗ್ರಾ.ಪಂ. ಪಿಡಿಒ ಅನಿಲ್ ಬಿರಾದಾರ್, ಗ್ರಾಮಲೆಕ್ಕಿಗ ದಿನೇಶ್, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಮೊದಲಾದವರಿದ್ದರು.

ತಹಶಿಲ್ದಾರ್ ನಿರ್ದೇಶನದ ಅನ್ವಯ ಲಾರಿಗಳನ್ನು ಮಾತ್ರ ವಶಪಡಿಸಿಕೊಂಡಿದ್ದೆವೆ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿ ಲತಾ ಕುಲಕರ್ಣಿ ತಿಳಿಸಿದ್ದಾರೆ.

Write A Comment