ಕರಾವಳಿ

ದುಬೈ ಅಲ್-ಇಸ್ಲಾಮಿಯ್ಯ ಯೂತ್ ಫೆಡರೇಷನ್‌ನ ಸಭೆಯಲ್ಲಿ ಗಣ್ಯರಿಗೆ ಸನ್ಮಾನ

Pinterest LinkedIn Tumblr
unnamed
ದುಬೈ, ಜ.4: ಅಲ್-ಇಸ್ಲಾಮಿಯ್ಯ ಯೂತ್ ಫೆಡರೇಷನ್ ‘ಗ್ರಾಂಡ್‌ಮೀಟ್-2015’ ಸಭೆಯು ಉಚ್ಚಿಲ ಪೊಲ್ಯ ಹಿಮಾಯತುಲ್ ಇಸ್ಲಾಂ ಮದ್ರಸದ ಅಬ್ದುಲ್ ನಾಸಿರ್ ಸಅದಿಯವರ ದುವಾಶೀರ್ವಾದದೊಂದಿಗೆ ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಸಮದ್ ಬಿರಾಲಿ ವಹಿಸಿದ್ದರು.
ಸಭೆಯಲ್ಲಿ ಊರಿನಿಂದ ಆಗಮಿಸಿದ ಅತಿಥಿಗಳಾದ ಅಬ್ದುಲ್ ನಾಸಿರ್ ಸಅದಿ, ಆಲಿಯಬ್ಬ ಕಟಪಾಡಿ ಹಾಗೂ ಮೂಸಾ ಮೋನಬ್ಬ ಬಿ.ಎಂ.ರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ನೆರೆದ ಗಣ್ಯರು ಸನ್ಮಾನಿಸಿದರು.
unnamed (1)
10906016_775720779132169_1761370784618838421_n (1)
10888357_775720989132148_1641809694136167265_n
10268608_775720852465495_9164232838768717512_n
ಇದೇ ವೇಳೆ ಎರ್ಮಾಳು ಜುಮಾ ಮಸೀದಿಯ ಖತೀಬರಾಗಿ ನಿವೃತ್ತರಾಗಿದ್ದ ಅಬ್ದುಲ್ ಹಮೀದ್ ಮುಸ್ಲಿಯಾರ್‌ರ ನಿಧನದ ಹಿನ್ನೆಲೆಯಲ್ಲಿ ಮಯ್ಯತ್ ನಮಾಝ್ ನೆರವೇರಿಸಲಾಯಿತು.
ಸಭೆಯಲ್ಲಿ ಸಂಸ್ಥೆಯ ಸ್ಥಾಪಕರಲ್ಲೋರ್ವರಾದ  ಬಾವಾ ಅಬ್ದುಲ್ ಖಾದರ್ ಎಸ್.ಕೆ., ಗೌರವಾಧ್ಯಕ್ಷ ಸುಲೈಮಾನ್ ಮೊಯಿದಿನ್ ಅರಫಾ, ಕೋಶಾಧಿಕಾರಿ ಆಸಿಫ್ ಸಾಬನ್, ಕಾರ್ಯದರ್ಶಿ ಅಲ್ತಾಫ್ ಎಂ., ಅಬ್ದುಲ್ ಹಮೀದ್ ಉಳ್ಳಾಲ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Write A Comment