ಕರಾವಳಿ

ಚೈಲ್ಡ್‌ಲೈನ್ ಸೆ ದೋಸ್ತಿ ಉದ್ಘಾಟನಾ ಸಮಾರಂಭ

Pinterest LinkedIn Tumblr

child_line_spl_photo

ಮಂಗಳೂರು,ನ.15 : ಕದ್ರಿಯ ಬಾಲ ಭವನದಲ್ಲಿ ಚೈಲ್ಡ್‌ಲೈನ್ ಸೆ ದೋಸ್ತಿ ಸಪ್ತಾಹ ಉದ್ಘಾಟನಾ ಸಮಾರಂಭ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಚೈಲ್ಡ್ ಲೈನ್ ಮಂಗಳೂರು-1098 , ಪಡಿ ಸಂಸ್ಥೆ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ(ರಿ), ರೇಡಿಯೋ ಬಿಗ್ ಎಫ್.ಎಮ್ 92.7, ಜೆ.ಸಿ.ಐ ಮಂಗಳೂರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಜಿಲ್ಲೆ, ಜಿಲ್ಲಾ ಕಾನೂನು ಪ್ರಾಧಿಕಾರ, ಗಿವಿಂಗ್ ಟ್ರೀ ಟ್ರಸ್ಟ್, ಮಂಗಳೂರು, ಹ್ಯಾಂಗ್ಯೊ ಐಸ್ ಕ್ರೀಮ್, ಜೆ.ಬಿ. ಇನ್‌ಫ್ರಾಟೆಕ್ ಇಂಡಿಯಾ ಲಿಮಿಟೆಡ್ ಮಂಗಳೂರು, ಇವರ ಸಹಯೋಗದೊಂದಿಗೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ಪಾಟೀಲ ನಾಗಲಿಂಗನ ಗೌಡ, ಮುಖ್ಯ ನ್ಯಾಯಿಕಾ ದಂಡಾಧಿಕಾರಿಗಳು ಹಾಗೂ ಅಧ್ಯಕ್ಷರು ಬಾಲ ನ್ಯಾಯ ಮಂಡಳಿ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಮಕ್ಕಳ ಪ್ರತಿನಿಧಿಯಾಗಿ ಕದ್ರಿ ಪ. ವರ್ಗ ಆಶ್ರಮ ಶಾಲೆಯ ಕಳಕೇಶ, ಶ್ರೀ. ನಿಕೇಶ್ ಶೆಟ್ಟಿ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ, ಡಾ. ಶರಣಪ್ಪ ಎಸ್.ಡಿ (ಐ.ಪಿ.ಎಸ್) ಪೊಲೀಸ್ ವರಿಷ್ಠಾಧಿಕಾರಿಗಳು ದ.ಕ. ಜಿಲ್ಲೆ, ಶ್ರೀಮತಿ ಗಟ್ರೂಡ್ ವೇಗಸ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲೆ, ಶ್ರೀ ಉಸ್ಮಾನ್. ಎ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದ.ಕ.ಜಿಲ್ಲೆ, ಶ್ರೀ. ರೆನ್ನಿ ಡಿ’ಸೋಜ , ನಿರ್ದೇಶಕರು, ಪಡಿ ಹಾಗೂ ಚೈಲ್ಡ್‌ಲೈನ್ ಮಂಗಳೂರು, ಶ್ರೀ. ಹಸನ್ ಸಾಹೇಬ್, ಅಧ್ಯಕ್ಷರು, ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರ, ಜೆಸೀ|ಜೆ‌ಎಫ್‌ಎಮ್| ಶ್ರೀಲೋಹಿತ್ ಶೆಟ್ಟಿ ಅಧ್ಯಕ್ಷರು-2014, ಜೆಸಿ‌ಐ ಮಂಗಳೂರು ಇವರು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಮಕ್ಕಳಿಗಾಗಿ ಚಿತ್ರಕಲಾ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಗೀತೆಗಳನ್ನು ಆಯೋಜಿಸಲಾಗಿತ್ತು.

ಚೈಲ್ಡ್‌ಲೈನ್ ಕೇಂದ್ರ ಸಂಯೋಜಕರಾದ ಶ್ರೀ. ಸಂಪತ್ ಕಟ್ಟಿ ಸ್ವಾಗತಿಸಿದರು, ಚೈಲ್ಡ್‌ಲೈನ್ ಸದಸ್ಯರಾದ ಕು. ಪವಿತ್ರ ವಂದಿಸಿದರು, ಚೈಲ್ಡ್‌ಲೈನ್ ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು ನಿರೂಪಿಸಿದರು.

Write A Comment