ಬಿಜಾಪುರ,a.17: ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕರ್ಣಾಟಕ ಬ್ಯಾಂಕಿನ 620 ನೇ ಶಾಖೆಯ ಉದ್ಘಾಟನೆಯನ್ನು ಶುಕ್ರವಾರದಂದು ಲಿಂಗಸುಗೂರು ತಾಲ್ಲೂಕು ಅಂಕಲಿಮಠದ ದಾಸೋಹಮೂರ್ತಿ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ರಾಘವೇಂದ್ರ ಭಟ್ ಎಂ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಯಾಂಕಿನ ಹುಬ್ಬಳ್ಳಿ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಬಂಧಕ ಶ್ರೀ ಗೋಪಾಲ್ ಎಸ್. ಪರ್ವತಿ ಮತ್ತು ಮುದ್ದೇಬಿಹಾಳದ ಶಾಖಾ ಪ್ರಬಂಧಕರಾದ ಸೋಮಶೇಖರ ಜಿ. ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
