ಕರಾವಳಿ

ಬಿಜೆಪಿ ದ.ಕ ಜಿಲ್ಲಾ ಕಾರ್ಯಕಾರಿಣಿ ಸಭೆ.

Pinterest LinkedIn Tumblr

bjp_sabhe_photo_1

ಮಂಗಳೂರು,ಅ.11 :ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನಪರ ಯೋಜನೆಗಳ ಬಹುಪಾಲು ಗ್ರಾಮಪಂಚಾಯತ್‌ಗಳ ಮೂಲಕ ಅನುಷ್ಠಾನಗೊಳ್ಳಲಿವೆ. ಮುಂಬರುವ ಗ್ರಾಮ ಪಂಚಾಯತ್ ಚುನಾವಣಾಗಳಿಗೆ ಈಗಿನಿಂದಲೇ ತಯಾರಿ ನಡೆಸಬೇಕು. ಪ್ರತೀ ಪಂಚಾಯತ್‌ಗೆ ಪ್ರಭಾರಿಗಳನ್ನು ನೇಮಕ ಮಾಡಿ, ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾರಿಗಳ ಮತ್ತು ಪಂಚಾಯತ್ ಸದಸ್ಯರ ಕಾರ್ಯಾಗಾರವನ್ನು ನಡೆಸಬೇಕು ಎಂದು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕರೆನೀಡಿದರು.

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಕಾರ್ಯಕಾರಿ ಸಭೆಯು ಶನಿವಾರದಂದು ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ.ಪ್ರತಾಪ್‌ಸಿಂಹ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು. ವೇದಿಕೆಯಲ್ಲಿ ಜಿಲ್ಲಾ ಸಹಪ್ರಭಾರಿ ಲಾಲಾಜಿ ಆರ್. ಮೆಂಡನ್, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ ಭಟ್ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಜಿಲ್ಲಾ ಪಂಚಾಯತ್ ಸದಸ್ಯೆ ದಿ| ಸಾವಿತ್ರಿ ಶಿವರಾಂ, ಪತ್ರಕರ್ತರಾದ ಎಂ.ವಿ.ಕಾಮತ್ ಮತ್ತು ದಿ| ಕಮಲಾ ಗೌಡ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅನುಕ್ರಮವಾಗಿ ಪುಲಸ್ಯ ರೈ, ಎಂ. ಶಂಕರ ಭಟ್ ಮತ್ತು ಆಶಾ ತಿಮ್ಮಪ್ಪ ದಿವಂಗತರ ಬಗ್ಗೆ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ ಇವರು ಜಿಲ್ಲಾ ಬಿಜೆಪಿ ನಿರ್ಧಾರಾನುಷ್ಠಾನ ಮತ್ತು ಜಿಲ್ಲಾಮಟ್ಟದ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು.

ಮಂಡಲವಾರು ಸಮಿತಿಗಳ ವರದಿ ಮತ್ತು ಜಿಲ್ಲಾ ಮೋರ್ಚಾಗಳ ವರದಿಯನ್ನು ಪಡೆದು ದಾಖಲಿಸಲಾಯಿತು. ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಿತು. ಜಮೀನು ಅತಿಕ್ರಮಣದ ಬಗ್ಗೆ ಸರಕಾರವು ತಿಳುವಳಿಕೆ ನೋಟೀಸು ನೀಡಿರುವುದು, ಸೀಮೆ‌ಎಣ್ಣೆ ಮುಕ್ತ ಜಿಲ್ಲೆ ಕಲ್ಪನೆ ಯಿಂದಾಗಿ ಬಡವರ್ಗದವರಿಗೆ ಆಗುವ ಸಮಸ್ಯೆಗಳು, ಪಡಿತರ ಚೀಟಿ ಗೊಂದಲಗಳ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.

ಮಂಡಲ ಮಟ್ಟದಲ್ಲಿ ಪ್ರಶಿಕ್ಷಣ ಪ್ರವೇಶ ವರ್ಗವನ್ನು ಮತ್ತು ಗ್ರಾಮ ಪಂಚಾಯತ್ ಪ್ರಭಾರಿಗಳ ಕಾರ್ಯಾಗಾರವನ್ನು ನಡೆಸಲು ನಿರ್ಧರಿಸಲಾಯಿತು. ಪೂಜಾ ಜಿ. ಪೈ ವಂದೇ ಮಾತರಂ ಹಾಡಿದರು. ಪ್ರ.ಕಾರ್ಯದರ್ಶಿ ಕಿಶೋರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತಾ. ಆರ್ ವಂದಿಸಿದರು. ಉಪಾಧ್ಯಕ್ಷ ಬಿ. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಾಜಿ ಶಾಸಕರಾದ ಕೃಷ್ಣ ಜೆ. ಪಾಲೆಮಾರ್, ಎನ್. ಯೋಗೀಶ್ ಭಟ್, ಬಿ. ನಾಗರಾಜ ಶೆಟ್ಟಿ, ಕೆ. ಮೋನಪ್ಪ ಭಂಡಾರಿ, ಕೆ. ಪದ್ಮನಾಭ ಕೊಟ್ಟಾರಿ, ಕುಂಬ್ಳೆ ಸುಂದರ ರಾವ್, ಕೆ. ಜಯರಾಮ ಶೆಟ್ಟಿ, ಕೆ.ಬಾಲಕೃಷ್ಣ ಭಟ್, ಪ್ರಮುಖರಾದ ಜ್ಯೇಷ್ಠ ಪಡಿವಾಳ್, ಸಂಜಯ ಪ್ರಭು, ಪುಷ್ಪಲತಾ ಗಟ್ಟಿ, ಚಂದ್ರಹಾಸ್ ಉಳ್ಳಾಲ್, ಕಸ್ತೂರಿ ಪಂಜ, ರವಿಶಂಕರ ಮಿಜಾರ್, ಚಂದ್ರಹಾಸ್ ಉಳ್ಳಾಲ್, ಜಿ.ಆನಂದ ಬಂಟ್ವಾಳ, ಬಾಲಕೃಷ್ಣ ಶೆಟ್ಟಿ ಬೆಳ್ತಂಗಡಿ, ಹರೀಶ್ ಕಂಜಿಪಿಲಿ ಮುಂತಾದವರು ಉಪಸ್ಥಿತರಿದ್ದರು.

Write A Comment