ಅಂತರಾಷ್ಟ್ರೀಯ

ಯುವಕರ ಮರ್ಮಾಂಗದ ಭಾಗವನ್ನು ಕತ್ತರಿಸಿ ತಿನ್ನುತ್ತಿದ್ದ ಇಬ್ಬರ ಬಂಧನ; ಅಷ್ಟಕ್ಕೂ ಅವರು ಮಾಡುತ್ತಿದ್ದ ಕಾಯಕವೇನು…?

Pinterest LinkedIn Tumblr

ಒಕ್ಲಹೋಮ: ಇದೊಂದು ಮಾನವ ಕುಲವೇ ಅಸಹ್ಯಪಡುವಂಥ ಘಟನೆ. ಅಷ್ಟಕ್ಕೂ ಏನೆಂಬುದು ಮುಂದೆ ಇದೆ ಓದಿ….

ಅಮೆರಿಕದ ಒಕ್ಲಹೋಮದಲ್ಲಿ ಯುವಕರ ಮರ್ಮಾಂಗದ ಭಾಗವನ್ನು ಕತ್ತರಿಸಿ ತಿನ್ನುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಂಧನದ ವೇಳೆ ಸಿಕ್ಕ ಮಾಹಿತಿ ಕೇಳಿದ್ರೆ ಮಾನವ ಕುಲವೇ ನಾಚುವಂತಿದೆ.

ಒಕ್ಲಹೋಮದಲ್ಲಿ 28 ವರ್ಷದ ಯುವಕನೊಬ್ಬ ಅಸ್ತವ್ಯಸ್ತನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗುಪ್ತಾಂಗದಲ್ಲಿ ರಕ್ತ ಸುರಿತಿತ್ತು. ಆತನಿಗೆ ಈ ಪರಿಸ್ಥಿತಿ ಬರಲು ಕಾರಣ ಏನು ಅನ್ನೋ ಪ್ರಶ್ನೆಗೆ ಅವನು ಬಿಚ್ಚಿಟ್ಟಿದ್ದು ಭಯಾನಕ ಕಥೆ. ಅದು ಯಾರು ಊಹಿಸಲಾಗದ ಸತ್ಯ ಕಥೆ.

53 ರ ವಯಸ್ಸಿನ ಬಾಬ್ ಲೀ ಅಲೆನ್ ಮತ್ತು 42 ವರ್ಷದ ಥಾಮಸ್ ಗೇಟ್ಸ್ ಎಂಬ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆಸ್ಪತ್ರೆಗೆ ದಾಖಲಾದ ಯುವಕ ಈ ಇಬ್ಬರ ಬಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿದ್ದ. ಈ ವೇಳೆ ಈ ಇಬ್ಬರು ಆ ಯುವಕನಿಗೆ ನೋವು ನಿಯಂತ್ರಿಸೂ ಮದ್ದು ಚುಚ್ಚಿ ಆತನ ಗುಪ್ತಾಂಗಕ್ಕೆ ಕತ್ತರಿ ಹಾಕಿದ್ದಾರೆ.

ಬ್ಲೇಡ್​ನಿಂದ ಕತ್ತರಿಸಿ ಅದನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಆ ಇಬ್ಬರು ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ನರ ಭಕ್ಷಕನಾಗಿದ್ದು, ಗುಪ್ತಾಂಗಗಳನ್ನು ಬೇಯಿಸದೆ ತಿನ್ನುವ ಆಸೆಯನ್ನು ಹೊಂದಿದ್ದಾನಾಂತೆ. ಆತನಿಗೆ ಅದನ್ನು ತಿನ್ನುವುದು ಬಹಳ ಇಷ್ಟ ಎಂಬ ಭಯಾನಕ ಸಂಗತಿಯೊಂದು ತಿಳಿದು ಬಂದಿದೆ. ಈ ಸಂಗತಿ ತಿಳಿಯುತ್ತಿದ್ದಂತೆ ಬೇಟೆಗೆ ನಿಂತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಾಬ್ ಲೀ ಅಲೆನ್ ಮತ್ತು ಥಾಮಸ್ ಗೇಟ್ಸ್ ಇಬ್ಬರೂ ಅಕ್ರಮವಾಗಿ ಹುಡಗರಿಗೆ ಲಿಂಗ ಪರಿವರ್ತನೆ ಮಾಡುವ ದಂಧೆ ಮಾಡುತ್ತಿದ್ದರು. ವೆಬ್ ಸೈಟ್​ಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹಾಗೂ 15 ವರ್ಷಗಳ ಅನುಭವವಿದೆ ಎಂದು ಸೈಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಆಸಕ್ತಿ ಇದ್ದ ಯುವಕರು ಇವರ ಬಳಿ ಬಂದು ಲಿಂಗ ಪರಿವರ್ತನೆ ಮಾಡಿಕೊಂಡು ಹಿಜ್ರಾಗಳಾಗುತ್ತಿದ್ದರು. ಈ ರೀತಿ ಯುವಕರ ಗುಪ್ತಾಂಗವನ್ನು ಕತ್ತರಿಸಿ ತಿನ್ನುವ ಕಾರ್ಯ ಮಾಡುತ್ತಿದ್ದರು. ಈ ಘಟನೆ ಅಮೆರಿಕ ಜನರ ನಿದ್ದೆ ಕೆಡಿಸಿದೆ.

Comments are closed.