ಅಂತರಾಷ್ಟ್ರೀಯ

ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದುಬಂದ ರೋಗಿಯ ಅನುಭವದ ಮಾತನ್ನೊಮ್ಮೆ ಕೇಳಿ…!

Pinterest LinkedIn Tumblr

ಲಂಡನ್: ನಾನು ಹೆಚ್ಚು ಕಡಿಮೆ ಸತ್ತೇ ಹೋಗಿದ್ದೆ. ಇನ್ನೂ ಸಹಜವಾಗಿ ಉಸಿರಾಡಲು ಕಷ್ಟಪಡುತ್ತಿದ್ದೇನೆ ಎನ್ನುತ್ತಾರೆ ಭಾರತ ಮೂಲದ ಇಂಗ್ಲೆಂಡಿನಲ್ಲಿರುವ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದುಬಂದ ರಿಯಾ ಲಖನಿ.

ಮನುಷ್ಯನಲ್ಲಿ ಉಸಿರಾಟವೆಂಬುದು ಸಹಜ ಕ್ರಿಯೆ,ಆದರೆ ಈಗ ನಾನು ಗಾಳಿಯನ್ನು ದೇಹದೊಳಗೆ ಹೇಗೆ ತೆಗೆದುಕೊಳ್ಳುವುದು, ಹೊರಗೆ ಬಿಡುವುದು ಹೇಗೆ ಎಂದು ನೆನಪಿಸಿಕೊಳ್ಳಬೇಕಾಗಿದೆ ಎಂದು ಈಶಾನ್ಯ ಲಂಡನಾ ನ ತನ್ನ ಮನೆಯಿಂದ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬಂದ ರಿಯಾ ಮನೆಯಲ್ಲಿ ಸ್ವ ನಿರ್ಬಂಧದಲ್ಲಿದ್ದಾರೆ. ಮನೆಯಲ್ಲಿರುವ ಪತಿಯ ಬಳಿ ಹೋಗುವುದಿಲ್ಲ, ಪೋಷಕರನ್ನು ನೋಡಲು ಸಾಧ್ಯವಾಗುವುದಿಲ್ಲ, ಸಹೋದರರನ್ನು ಭೇಟಿ ಮಾಡಲು ಆಗುತ್ತಿಲ್ಲ. ರಾತ್ರಿ ಉಸಿರಾಡಲು ಸಾಧ್ಯವಾಗದೆ ಸರಿಯಾಗಿ ನಿದ್ದೆ ಕೂಡ ಬರುವುದಿಲ್ಲವಂತೆ.

ಸರ್ಜರಿಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರಿಯಾ ಲಖಾನಿಗೆ ಕೊರೋನಾ ಲಕ್ಷಣ ಕಾಣಿಸಿಕೊಂಡಿತು. ಏಳು ವರ್ಷಗಳ ಹಿಂದೆ ಅವರಿಗೆ ಉಸಿರಾಟದ ತೀವ್ರ ಸಮಸ್ಯೆ ಉಂಟಾಗಿತ್ತಂತೆ. ಅವರಿಗೆ ಇದ್ದ ಒಸೊಫೇಜಿಲ್ ಎಂಬ ಕಾಯಿಲೆಯನ್ನು ಗುಣಪಡಿಸಲು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿತ್ತು.

ಆಸ್ಪತ್ರೆಯಲ್ಲಿ ಉಸಿರಾಟ ಸಮಸ್ಯೆಯುಂಟಾಗಿ ನಂತರ ದೇಹದ ಉಷ್ಣತೆ ಕೂಡ ಇದ್ದಕ್ಕಿದ್ದಂತೆ ಹೆಚ್ಚಾಯಿತಂತೆ. ಕೊರೋನಾ ಸೋಂಕಿನ ಶಂಕೆಯಿಂದ ಪರೀಕ್ಷಿಸಿದಾಗ ದೃಢಪಟ್ಟಿತು. ತಕ್ಷಣವೇ ಆಸ್ಪತ್ರೆಯಲ್ಲಿ ಅವರ ಕೊಠಡಿಯನ್ನು ಪ್ರತ್ಯೇಕ ವಾರ್ಡ್ ಮಾಡಿ ಉಳಿದ ರೋಗಿಗಗಳನ್ನು ಸ್ಥಳಾಂತರ ಮಾಡಲಾಯಿತು.

ರಿಯಾಗೆ ಹೆಚ್ಚಿನ ಆಕ್ಸಿಜನ್ ಬೇಕಾಗಿದ್ದರಿಂದ ಲಂಡನ್ ನ ಪ್ರಮುಖ ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಕೂಡ ಉಸಿರಾಟ ಸಮಸ್ಯೆ ತಲೆದೋರಿತು. ನ್ಯುಮೋನಿಯಾ ಜ್ವರದ ತರಹ ಲಕ್ಷಣ ಕಂಡುಬಂತು.

ಇಂಗ್ಲೆಂಡಿನಲ್ಲಿ ಇದುವರೆಗೆ 55 ಸಾವಿರ ಜನಕ್ಕೆ ಕೊರೋನಾ ತಗುಲಿದೆ, 7 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Comments are closed.