ಅಂತರಾಷ್ಟ್ರೀಯ

ಪಾಕ್​ ಪ್ರಧಾನಿ ಇಮ್ರಾನ್ ಖಾನ್ ರನ್ನು ಸೌದಿ ದೊರೆ ನ್ಯೂಯಾರ್ಕ್​ನಲ್ಲೇ ಬಿಟ್ಟು ತೆರಳಿದರೇ?

Pinterest LinkedIn Tumblr


ಇಸ್ಲಮಾಬಾದ್​: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಂದಿಲ್ಲೊಂದು ಕಾರಣಕ್ಕೆ ಹಲವರ ಬೇಸರಕ್ಕೆ ಕಾರಣರಾಗುತ್ತಿದ್ದಾರೆ. ಅಂತೆಯೆ, ಇಮ್ರಾನ್ ವರ್ತನೆಯಿಂದ ಬೇಸರಗೊಂಡ ಸೌದಿ ದೊರೆ ತಾವು ನೀಡಿದ್ದ ವಿಶೇಷ ಜೆಟ್​ ವಿಮಾನವನ್ನು ಹಿಂಪಡೆದರು ಎಂದು ಅಂತಾರಾಷ್ಟ್ರೀಯ ಪತ್ರಿಕೆಯೊಂದು ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಕಳೆದ ತಿಂಗಳು ಅಮೇರಿಕದಲ್ಲಿ ನಡೆದ 74ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಇಮ್ರಾನ್ ಖಾನ್ ಸಹ ಭಾಗವಹಿಸಿದ್ದರು. ಒಂದು ವಾರದ ಕಾರ್ಯಕ್ರಮಕ್ಕೆ ಇಮ್ರಾನ್ ಹೋಗಿಬರಲೆಂದು ಸೌದಿ ದೊರೆ ಮೊಹಮ್ಮದ್​ ಬಿನ್ ಸಲ್ಮಾನ್ ತಮ್ಮ ವಿಶೇಷ ಜೆಟ್​ ವಿಮಾನವನ್ನು ನೀಡಿದ್ದರು.

ಆದರೆ ಸೆಪ್ಟೆಂಬರ್​28ರಂದು ಇಮ್ರಾನ್ ಹಾಗೂ ಅವರ ನಿಯೋಗ ನ್ಯೂಯಾರ್ಕ್​ನಿಂದ ಪಾಕಿಸ್ತಾನಕ್ಕೆ ಹಿಂತಿರುಗುವ ಸಮಯದಲ್ಲಿ ಸೌದಿ ದೊರೆ ತಮ್ಮ ವಿಮಾನವನ್ನು ವಾಪಸ್​ ಕರೆಸಿಕೊಂಡರು. ಇದರಿಂದ ಅನಿವಾರ್ಯವಾಗಿ ಇಮ್ರಾನ್ ಖಾಸಗಿ ವಿಮಾನದ ಮೂಲಕ ಇಸ್ಲಮಾಬಾದ್​ಗೆ ಬರುವಂತಾಯಿತು. ಇಷ್ಟಕ್ಕೆಲ್ಲ ಇಮ್ರಾನ್ ಕೆಲವು ವರ್ತನೆಗಳ ಬಗ್ಗೆ ಸೌದಿ ದೊರೆ ಬೇಸರಗೊಂಡಿದ್ದೇ ಕಾರಣ ಎಂದೂ ಪತ್ರಿಕೆಯಲ್ಲಿ ಬರೆಯಲಾಗಿದೆ.
ಆದರೆ ಇದೆಲ್ಲಾ ಸುಳ್ಳು ಎಂದು ಪಾಕಿಸ್ತಾನ ಸರ್ಕಾರ ನಿರಾಕರಿಸಿದೆ.

Comments are closed.