ಅಂತರಾಷ್ಟ್ರೀಯ

11 ವರ್ಷದ ಬಾಲಕನ ಭಾಷಣ ಕದ್ದ ಪಾಕ್ ರಾಷ್ಟ್ರಪತಿ ಕಚೇರಿ

Pinterest LinkedIn Tumblr

1-pak-presidnet-office
ಇಸ್ಲಾಮಾಬಾದ್: ಪಾಕಿಸ್ತಾನದ ಸಂಸ್ಥಾಪಕ ಎಂ.ಎ.ಜಿನ್ನಾ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಭಾಷಣ ಮಾಡಲು ತಾನು ಸಿದ್ದಪಡಿಸಿದ್ದ ಭಾಷಣದ ಪ್ರತಿಯನ್ನು ರಾಷ್ಟ್ರಪತಿ ಕಚೇರಿ ಕದ್ದು ಬೇರೆಯವರಿಗೆ ನೀಡಿದೆ ಎಂದು ಆರೋಪಿಸಿರುವ 11 ವರ್ಷದ ಬಾಲಕನೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನೆ.

6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೊಹಮ್ಮದ್ ಸಬೀಲ್ ಹೈದರ್ ಎಂಬ ಬಾಲಕ ತನ್ನ ತಂದೆಯ ಮೂಲಕ ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ನನ್ನ ಅನುಮತಿ ಇಲ್ಲದೆ ಭಾಷಣದ ಪ್ರತಿಯನ್ನು ಇತರರಿಗೆ ನೀಡಲಾಗಿದೆ ಎಂದು ಬಾಲಕ ಆರೋಪಿಸಿದ್ದಾನೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ನಡೆದಿದ್ದಿಷ್ಟು…

ಈ ವರ್ಷ ಮಾರ್ಚ್ 23 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈದರ್ ಭಾಷಣ ಮಾಡಿದ್ದ, ಇದಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಂಸಾ ಪತ್ರವನ್ನೂ ಸಹ ಪಡೆದಿದ್ದ. ಆ ನಂತರ ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಅವರ 141ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲು ರಾಷ್ಟ್ರಪತಿ ಭವನ ಹೈದರ್ಗೆ ಜಿನ್ನಾ ಕುರಿತು ಭಾಷಣ ಮಾಡಲು ಕೋರಿದೆ.

ರಾಷ್ಟ್ರಪತಿ ಭವನದ ಕೋರಿಕೆಯಂತೆ ಭಾಷಣವನ್ನು ಸಿದ್ಧಪಡಿಸಿ ಡಿಸೆಂಬರ್ 14 ರಿಂದ ಅಭ್ಯಾಸ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಭಾಷಣದ ಪ್ರತಿಯನ್ನು ಅಂತಿಮ ಒಪ್ಪಿಗೆ ಪಡೆಯುವ ಸಲುವಾಗಿ ರಾಷ್ಟ್ರಪತಿ ಕಚೇರಿಗೆ ಹೈದರ್ ಸಲ್ಲಿಸಿದ್ದನು. ಇದೇ ಸಂದರ್ಭದಲ್ಲಿ ತನ್ನ ವಾರ್ಷಿಕ ಪರೀಕ್ಷೆಗಳಿಗೂ ಸಹ ಹಾಜರಾಗದೆ ಹೈದರ್ ಭಾಷಣ ಅಭ್ಯಾಸ ಮಾಡಿದ್ದಾನೆ. ಆದರೆ ಡಿಸೆಂಬರ್ 22 ರಂದು ಭಾಷಣವನ್ನು ರೆಕಾರ್ಡ್ ಮಾಡಲು ರಾಷ್ಟ್ರಪತಿ ಭವನ ತಲುಪಿದ ಹೈದರ್ಗೆ ಆಘಾತವೊಂದು ಎದುರಾಗಿತ್ತು. ತಾನು ಸಿದ್ಧಪಡಿಸಿದ ಭಾಷಣವನ್ನು ಬೇರೊಬ್ಬ ಬಾಲಕಿಗೆ ನೀಡಲಾಗಿತ್ತು. ಆಕೆ ಮಾಡಿದ ಭಾಷಣವನ್ನು ರೆಕಾರ್ಡ್ ಮಾಡಲಾಯಿತು. ಈ ಸಂಬಂಧ ಹೈದರ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಜತೆಗೆ ಕಾರ್ಯಕ್ರಮದಲ್ಲಿ ಹೈದರ್ ಮನವಿಯನ್ನು ಅಧಿಕಾರಿಗಳು ಪುರಸ್ಕರಿಸಲಿಲ್ಲ ಎಂದು ಹೈದರ್ ಕೋರ್ಟಿನಲ್ಲಿ ತಿಳಿಸಿದ್ದಾನೆ.

Comments are closed.