ಅಂತರಾಷ್ಟ್ರೀಯ

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪ್ರಿಯಕರನ ಗುಪ್ತಾಂಗವನ್ನೇ ಕತ್ತರಿಸಿ ಹಾಕಿದ ಪತಿ !

Pinterest LinkedIn Tumblr

kneif'

ಬಾವು(ಪಿಲಿಫ್ಫೀನ್ಸ್ ): ತನ್ನ ಪತ್ನಿ ಪರಪುರುಷನೊಂದಿಗೆ ಇದ್ದದ್ದನ್ನು ನೋಡಿದ ಆಕ್ರೋಶಗೊಂಡ ಪತಿ ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಪಿಲಿಫ್ಫೀನ್ಸ್ ನ ಕಾಮ್ ಸೂರ್ ನಲ್ಲಿ ನಡೆದಿದೆ.

ಗಾಸ್ಪರ್ ಎರ್ಮೋ ಗುಡಿಸಲೊಂದರಲ್ಲಿ ಮಹಿಳೆ ಜೊತೆ ಇದ್ದ. ಈ ವೇಳೆ ವಿಕ್ಟರ್ ಎಂಬಾತ ಗುಡಿಸಲೊಳಗ್ಗೆ ನುಗ್ಗಿದ್ದಾನೆ. ನಂತರ ಪತಿಯನ್ನು ಕಂಡ ಪತ್ನಿ ಸ್ಥಳದಿಂದ ಓಡಿದ್ದಾಳೆ.

ಆದರೆ ಪತ್ನಿಯ ಪ್ರಿಯಕರನನ್ನು ಕಂಡು ರೊಚ್ಚಿಗೆದ್ದ ಪತಿ ಚೂರಿಯಿಂದ ಹಿಗ್ಗಾಮುಗ್ಗಾ ಇರಿದಿದ್ದಾನೆ. ಮಾತ್ರವಲ್ಲದೆ ಮರ್ಮಾಂಗವನ್ನೇ ಕತ್ತರಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚಿಕಿತ್ಸೆ ನೀಡಲಾಗುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

Comments are closed.