ಅಂತರಾಷ್ಟ್ರೀಯ

ಚಂದ್ರನನ್ನು ಅಂದವಾಗಿ ಸೆರೆಹಿಡಿದ ನಾಸಾ

Pinterest LinkedIn Tumblr

moonವಾಷಿಂಗ್ಟನ್: ಚಂದಮಾಮನನ್ನು ತೋರಿಸಿ ಮಕ್ಕಳಿಗೆ ಕತೆ ಹೇಳುವುದು, ಊಟ ಮಾಡಿಸುವುದನ್ನು ಕಂಡಿದ್ದೇವೆ. ಆದರೆ ಚಂದ್ರನ ಒಂದು ಮುಖ ಮಾತ್ರ ಕಂಡಿದ್ದ ನಮಗೆಲ್ಲ ಆತನನ್ನು ಮತ್ತೊಂದು ಕೋನದಿಂದ ತೋರಿಸುವ ಪ್ರಯತ್ನವನ್ನು ನಾಸಾ ಮಾಡಿದೆ.

ಹೌದು, ಭೂಮಿಯಿಂದ ನೋಡಲು ಸಾಧ್ಯವಿಲ್ಲದ ಚಂದ್ರನ ಕಪ್ಪು ಭಾಗದ ಅಪರೂಪದ ವಿಶೇಷ ಚಿತ್ರಗಳನ್ನು ನಾಸಾ ಉಪಗ್ರಹ ಸೆರೆ ಹಿಡಿದಿದೆ. ಭೂಮಿಯ ಒಂದು ಭಾಗದಲ್ಲಿ ಬೆಳಕು ಬೀಳುವಾಗ ನಾಸಾದ ಡೀಪ್ ಸ್ಪೇಸ್ ಕ್ಲೈಮೇಟ್ ಅಬ್ಸರ್ವೇಟರಿ ಉಪಗ್ರಹದ ಕ್ಯಾಮೆರಾ ಚಂದ್ರನ ಈ ಅಪರೂಪದ ಚಿತ್ರಗಳನ್ನು ಸೆರೆಹಿಡಿದು ರವಾನಿಸಿದೆ.

ಭೂಮಿಯಿಂದ 1.6 ಲಕ್ಷ ಕಿಮೀ ದೂರದಿಂದ ಈ ಚಿತ್ರಗಳನ್ನು ತೆಗೆಯಲಾಗಿದೆ. ಭೂಮಿಯಿಂದ ನೋಡಲು ಸಾಧ್ಯವಾಗದಿರುವ ಚಂದ್ರನ ಈ ಭಾಗ ಪ್ರಕಾಶಮಾನವಾಗಿರುವುದು ಸೆರೆ ಹಿಡಿದಿರುವ ಸರಣಿ ಚಿತ್ರಗಳಲ್ಲಿ ಗೋಚರವಾಗಿದೆ.

Write A Comment