ಅಂತರಾಷ್ಟ್ರೀಯ

ಎಲ್ಲದಕ್ಕೂ ವೇಗ ನೀಡುವ ಚಿಪ್! ಇದರ ವಿಶೇಷತೆ ಏನು ? ಮುಂದೆ ಓದಿ…

Pinterest LinkedIn Tumblr

chip

ನ್ಯೂಯಾರ್ಕ್: ಇದು ವೇಗದ ದುನಿಯಾ. ಇಲ್ಲಿ ಎಲ್ಲವೂ ಅತಿ ವೇಗದಲ್ಲೇ ಅಗಿಬಿಡಬೇಕೆಂದು ಆಶಿಸುವವರೇ ಹೆಚ್ಚು. ಇಂಥ ಮನೋಭಾವದವರಿಗೆಂದೇ ಐಬಿಎಂ ವೇಗಕ್ಕೆ ಮತ್ತುಷ್ಟು ಆವೇಗ ನೀಡುವಂಥ ಚಿಪ್ ಅನ್ನು ಬಿಡುಗಡೆ ಮಾಡಿದೆ. ಐಬಿಎಂನ ಪ್ರಕಾರ ಈ ಚಿಪ್ ಬಳಕೆಯಿಂದ ಸ್ಮಾರ್ಟ್​ಫೋನ್​ನಿಂದ ಹಿಡಿದು ವಿಮಾನದವರೆಗೆ ಎಲ್ಲದರ ವೇಗಕ್ಕೆ ಮತ್ತಷ್ಟು ಆವೇಗ ತುಂಬಬಹುದಂತೆ! ಸ್ಯಾಮ್ಸಂಗ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಗ್ಲೋಬಲ್​ಫೌಂಡ್ರೀಸ್ ಸಂಸ್ಥೆಯ ಸಹಯೋಗದಲ್ಲಿ ತಾನು ಕೈಗೊಂಡಿರುವ 3 ಶತಕೋಟಿ ಡಾಲರ್ ಮೊತ್ತದ ಸಂಶೋಧನಾ ಒಪ್ಪಂದದ ಭಾಗವಾಗಿ ಈ ಚಿಪ್ ಅನ್ನು ಸಂಶೋಧಿಸಿರುವುದಾಗಿ ಐಬಿಎಂ ಹೇಳಿಕೊಂಡಿದೆ.

ಈ ಚಿಪ್​ಗೆ ಸೆವೆನ್ ನ್ಯಾನೋಮೀಟರ್ ಚಿಪ್ ಎಂದು ಐಬಿಎಂ ಹೆಸರು ನೀಡಿದೆ. ಈ ಚಿಪ್​ನಲ್ಲಿ 20 ದಶಲಕ್ಷ ಸೂಕ್ಷಾ್ಮತಿಸೂಕ್ಷ್ಮ ಸ್ವಿಚ್​ಗಳನ್ನು ಅಥವಾ ಟ್ರಾನ್ಸಿಸ್ಟರ್​ಗಳನ್ನು ಅಳವಡಿಸಿ, ಕಂಪ್ಯೂಟಿಂಗ್ ಶಕ್ತಿಯನ್ನು ಮತ್ತುಷ್ಟು ಹೆಚ್ಚಿಸಬಹುದಂತೆ.

ಈ ಚಿಪ್​ಗಳ ಸಹಾಯದಿಂದ ಭವಿಷ್ಯದ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ ಸಿಸ್ಟಮ್್ಸ, ಕಾಗ್ನಿಟೀವ್ ಕಂಪ್ಯೂಟಿಂಗ್, ಮೊಬೈಲ್ ಫೋನ್​ಗಳು ಮತ್ತಿತರ ಆಧುನಿಕ ತಂತ್ರಜ್ಞಾನಾಧಾರಿತ ಉತ್ಪನ್ನಗಳಿಗೆ ಹೆಚ್ಚಿನ ವೇಗ ನೀಡಬಹುದೆಂದು ಐಬಿಎಂ ಪ್ರತಿಪಾದಿಸಿದೆ.

Write A Comment