
ಮುಂಬೈ: ಮುಂಬೈ ಪೊಲೀಸ್ ಸಿಬ್ಬಂದಿಯೊಬ್ಬರ ಡ್ಯಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಧೂಳ್ ಎಬ್ಬಿಸುತ್ತಿದೆ.
ಇತ್ತೀಚೆಗಷ್ಟೇ ಅವರು ಡ್ಯಾನ್ಸ್ ಮಾಡಿರುವ ಕೆಲವು ವೀಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್ಗಳು ಹರಿದು ಬರುತ್ತಿದೆ.
38 ವರ್ಷದ ಅಮೋಲ್ ಯಶವಂತ್ ಕಾಂಬ್ಳೆ ನೈಗಾಂವ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಆಫೀಸ್ ಕೆಲಸ ಮುಗಿದ ಬಳಿಕ ಅಥವಾ ರಜಾದಿನಗಳಲ್ಲಿ ಚಲನಚಿತ್ರ ಗೀತೆಗಳಿಗೆ ನೃತ್ಯ ಅಭ್ಯಾಸ ಮಾಡುತ್ತಾರೆ ಮತ್ತು ಅವುಗಳನ್ನು ವೀಡಿಯೋ ಮಾಡುತ್ತಾರೆ. ಸದ್ಯ ಅಪ್ಪು ರಾಜ ಚಿತ್ರದ ‘ಆಯಾ ಹೈ ರಾಜಾ’ ಸಾಂಗ್ಗೆ ಅಮೋಲ್ ಯಶವಂತ್ ಕಾಂಬ್ಳೆಯವರು ಮಾಡಿರುವ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.
Comments are closed.