ರಾಷ್ಟ್ರೀಯ

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮ 2023ನೇ ಇಸವಿ ಆಗಸ್ಟ್ 15ರವರೆಗೆ ಮುಂದುವರಿಯಲಿದೆ: ಮೋದಿ

Pinterest LinkedIn Tumblr

ನವದೆಹಲಿ: ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮ 2023ನೇ ಇಸವಿ ಆಗಸ್ಟ್ 15ರವರೆಗೆ ಮುಂದುವರಿಯಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಬರಮತಿ ಆಶ್ರಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ದಂಡಿ ಮೆರವಣಿಗೆಯ 91ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೊದಲ ದಿನದ ಕಾರ್ಯಕ್ರಮವಾಗಿದೆ. ಮುಂದಿನ ವರ್ಷ ಆಗಸ್ಟ್ 15ರ 75ನೇ ಸ್ವಾತಂತ್ರ್ಯ ದಿನಾಚರಣೆಯ ವರ್ಷಾಚರಣೆಯ 75 ವಾರಗಳಿಗೆ ಮೊದಲು ಕಾರ್ಯಕ್ರಮ ಆರಂಭವಾಗಿದೆ. ಇದು 2023ನೇ ಆಗಸ್ಟ್ 15ರವರೆಗೆ ಮುಂದುವರಿಯಲಿದೆ. ಸ್ವಾತಂತ್ರ್ಯ ಹೋರಾಟ, 75 ಕ್ಕೆ ಆಲೋಚನೆಗಳು, 75 ರಲ್ಲಿ ಸಾಧನೆಗಳು, ಕ್ರಿಯೆಗಳು ಮತ್ತು 75 ರಲ್ಲಿ ಪರಿಹಾರಗಳು- ಈ ಐದು ಕಂಬಗಳು(ವಿಷಯಗಳು) ದೇಶವನ್ನು ಮುಂದುವರಿಸಲು ಪ್ರೇರೇಪಿಸುತ್ತವೆ ಎಂದರು.

ಲೋಕಮಾನ್ಯ ತಿಲಕ್ ಅವರ ‘ಪೂರ್ಣ ಸ್ವರಾಜ್’ ” ದೆಹಲಿ ಚಲೋ ‘, ಕ್ವಿಟ್ ಇಂಡಿಯಾ ಚಳವಳಿಗೆ ಆಜಾದ್ ಹಿಂದ್ ಫೌಜ್ ಅವರ ಕರೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ, ಮಂಗಲ್ ಪಾಂಡೆ, ತಾತ್ಯಾ ಟೋಪೆ, ರಾಣಿ ಲಕ್ಷ್ಮಿ ಬಾಯಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಪಂಡಿತ್ ನೆಹರು , ಸರ್ದಾರ್ ಪಟೇಲ್, ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ನಾವೆಲ್ಲಾ ಸಾಕಷ್ಟು ಪ್ರಭಾವಿತರಾಗಿದ್ದೇವೆ ಎಂದರು.

ಭಾರತದ ಲಸಿಕೆ ಇಡೀ ಜಗತ್ತಿಗೆ ಫಲ: ಕೋವಿಡ್-19 ಲಸಿಕೆ ತಯಾರಿಯಲ್ಲಿ ಭಾರತ ಸ್ವಾವಲಂಬಿಯಾಗಿದ್ದು ಇಂದು ವಿದೇಶಗಳಿಗೆ ಸಹ ಒದಗಿಸುತ್ತಿದೆ. ಕೇವಲ ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿಗೆ ಇಂದು ಭಾರತದ ಸಾಧನೆ ಗೊತ್ತಾಗುತ್ತಿದೆ ಎಂದರು.

ಇತಿಹಾಸದ ವೈಭವವನ್ನು ಉಳಿಸಬೇಕು: ಇತಿಹಾಸದ ವೈಭವವನ್ನು ಉಳಿಸಲು ದೇಶವು ಕಳೆದ ಆರು ವರ್ಷಗಳಿಂದ ಪ್ರಜ್ಞಾಪೂರ್ವಕ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಪ್ರದೇಶಗಳಲ್ಲಿ ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ದಂಡಿ ಯಾತ್ರೆಗೆ ಸಂಬಂಧಿಸಿದ ವೆಬ್ ಸೈಟ್ ನ ನವೀಕರಣವನ್ನು ಎರಡು ವರ್ಷಗಳ ಹಿಂದೆ ಪೂರ್ಣಗೊಳಿಸಿತು. ಈ ಸಂದರ್ಭದಲ್ಲಿ ದಂಡಿಗೆ ಭೇಟಿ ನೀಡುವ ಅವಕಾಶ ನನಗೆ ಒದಗಿಬಂತು ಎಂದು ಪ್ರಧಾನಿ ಹೇಳಿದರು.

ದೇಶದ ಮೂಲೆ ಮೂಲೆಯಿಂದ ಎಷ್ಟೋ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಯುವಕರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ತಮಿಳುನಾಡಿನ 32 ವರ್ಷದ ಯುವಕ ಕೋಡಿ ಕಠ್ಮರನ್ ಅವರನ್ನು ನೆನಪಿಸಿಕೊಳ್ಳಿ. ಬ್ರಿಟಿಷರು ಯುವಕನ ತಲೆಗೆ ಗುಂಡು ಹಾರಿಸಿದರು, ಆದರೆ ಸಾಯುವಾಗಲೂ ಅವರು ದೇಶದ ಧ್ವಜವನ್ನು ನೆಲದಲ್ಲಿ ಬೀಳಲು ಬಿಡಲಿಲ್ಲ.

ಇಂಥವರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಪ್ರತಿಯೊಂದು ದಿಕ್ಕಿನಲ್ಲಿಯೂ, ಪ್ರತಿಯೊಂದು ಪ್ರದೇಶದಲ್ಲೂ ನಿರಂತರವಾಗಿ ಜಾಗೃತಗೊಳಿಸುವ ಕೆಲಸವನ್ನು ನಮ್ಮ ಸಂತರು-ಮಹಾತ್ಮರು, ಆಚಾರ್ಯರು ಮಾಡಿದರು, ಭಕ್ತಿ ಚಳವಳಿಯು ದೇಶದಲ್ಲಿ ಸ್ವಾತಂತ್ರ್ಯ ಚಳವಳಿಗೆ ದಾರಿದೀಪವಾಯಿತು ಎಂದು ಪ್ರಧಾನಿ ಹೇಳಿದರು.

1857 ರ ಸ್ವಾತಂತ್ರ್ಯ ಸಂಗ್ರಾಮ, ಮಹಾತ್ಮ ಗಾಂಧಿಯವರು ವಿದೇಶದಿಂದ ಹಿಂದಿರುಗಿದ್ದು ಸತ್ಯಾಗ್ರಹದ ಶಕ್ತಿಯನ್ನು ರಾಷ್ಟ್ರಕ್ಕೆ ನೆನಪಿಸುತ್ತದೆ, ಲೋಕಮಾನ್ಯ ತಿಲಕ್ ಅವರ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆ, ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್, ಫೌಜ್ ಅವರ ದೆಹಲಿ ಮೆರವಣಿಗೆ, ದೆಹಲಿ ಚಲೋ ಘೋಷಣೆಗಳಂತವುಗಳನ್ನು ಈ ದೇಶದ ನಾಗರಿಕರು ಯಾರು ತಾನೆ ಮರೆಯಲು ಸಾಧ್ಯ, ಇಂಥವರ ಕಥೆಗಳನ್ನು, ಮಾಡಿರುವ ಮಹಾತ್ಕಾರ್ಯಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಕೊಂಡೊಯ್ದರೆ ಮಾತ್ರ ದೇಶದ ಪ್ರತಿಷ್ಠೆ,ಹೆಮ್ಮೆ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಪ್ರಧಾನಿ ಭಾವಿಸಿದರು.

ದಂಡಿ ಸತ್ಯಾಗ್ರಹ: ಉಪ್ಪನ್ನು ಕಾರ್ಮಿಕ ಮತ್ತು ಸ್ವಾವಲಂಬನೆಯ ಸಂಕೇತವೆಂದು ಪರಿಗಣಿಸಲಾಗಿದೆ. ಗಾಂಧೀಜಿಯವರು ಭಾರತೀಯರು ಬ್ರಿಟಿಷರ ಕೈಕೆಳಗೆ ಗುಲಾಮರಾಗಿರುವುದರ ನೋವನ್ನು ಅರ್ಥಮಾಡಿಕೊಂಡರು ಮತ್ತು ಈ ವಿಷಯವನ್ನು ಪ್ರತಿ ಭಾರತಕ್ಕೂ ಒಂದು ಚಳುವಳಿಯನ್ನಾಗಿ ಮಾಡಿದರು. ಅಂತೆಯೇ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ವಿಭಿನ್ನ ಸಂದೇಶಗಳಿವೆ. ಇಂದಿನ ಭಾರತ ಅದರಿಂದ ಕಲಿಯಬಹುದು ಮತ್ತು ಮುಂದುವರಿಯಬಹುದು.ಭಾರತೀಯರಿಗೆ ಉಪ್ಪು ನಂಬಿಕೆಯ ಸಂಕೇತವಾಗಿದೆ ಎಂದರು.

ನಂತರ ದಂಡಿ ಸತ್ಯಾಗ್ರಹದ 91ನೇ ವರ್ಷಾಚರಣೆ ಸಂದರ್ಭದಲ್ಲಿ ದಂಡಿ ಪಾದಯಾತ್ರೆಗೆ ಸಬರಮತಿಯಲ್ಲಿ ಇಂದು ಚಾಲನೆ ನೀಡಿದರು. 81 ಮಂದಿ ಆಶ್ರಮದಿಂದ ಪಾದಯಾತ್ರೆ ಆರಂಭಿಸಿ 386 ಕಿಲೋ ಮೀಟರ್ ಪ್ರಯಾಣಿಸಿ ನವ್ಸರಿಯ ದಂಡಿಗೆ ಪ್ರಯಾಣ ಬೆಳೆಸಲಿದ್ದಾರೆ. 25 ದಿನಗಳ ಕಾಲ ಪಾದಯಾತ್ರೆ ಸಾಗಿ ಏಪ್ರಿಲ್ 5ಕ್ಕೆ ಮುಕ್ತಾಯವಾಗಲಿದೆ.

ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ, 78 ಜನರು 1930 ರ ಮಾರ್ಚ್ 12 ರಂದು ‘ಉಪ್ಪು ಸತ್ಯಾಗ್ರಹ’ ಘೋಷಿಸುವ ಮೂಲಕ ಸಬರಮತಿ ಆಶ್ರಮದಿಂದ ದಂಡಿ ಯಾತ್ರೆ ಆರಂಭಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ವೆಬ್ ಸೈಟ್ ಗೆ ಚಾಲನೆ ನೀಡಿದರು.

Comments are closed.