ರಾಷ್ಟ್ರೀಯ

ಅತೀ ಹಳೇಯ ಭಾಷೆಯಾಗಿರುವ ತಮಿಳು ಕಲಿಯದ್ದಕ್ಕೆ ವಿಷಾದವಿದೆ: ಮೋದಿ ಬೇಸರ

Pinterest LinkedIn Tumblr

ಹೊಸ ದಿಲ್ಲಿ: ಪ್ರಪಂಚದ ಅತೀ ಹಳೇಯ ಭಾಷೆಯಾಗಿರುವ ತಮಿಳು ಕಲಿಯದ್ದಕ್ಕೆ ವಿಷಾದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ಪ್ರಧಾನಿ ಇಂಥಹದ್ದೊಂದು ಹೇಳಿಕೆ ನೀಡಿದ್ದಾರೆ. ಆ ತಮಿಳುನಾಡಿನಲ್ಲಿ ಆಳವಾಗಿ ಬೇರೂರಿರುವ ಭಾ‍ಷೆ ಹಾಗೂ ಸಂಸ್ಕೃತಿಯ ಬಗ್ಗೆ ಗಮನ ಸೆಳೆಯಲು ಮುಂದಾಗಿದ್ದಾರೆ.

ತಮ್ಮ ಮಾಸಿಕ ಮನ್‌ ಕೀ ಬಾತ್‌ ರೆಡಿಯೋ ಕಾರ್ಯಕ್ರಮದ 73ನೇ ಅವತರಣಿಕೆಯಲ್ಲಿ ಮಾತನಾಡಿದ ಅವರು, ತಮಿಳು ಭಾಷೆಯನ್ನು ಕಲಿಯುವ ಅವಕಾಶವನ್ನು ಕಳೆದುಕೊಂಡೆ. ಇದರ ಬಗ್ಗೆ ವಿಷಾದವಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಯಾರೋ ಒಬ್ಬರು ಕೇಳಿದ್ದರು. ಸುದೀರ್ಘ ಅವಧಿಗೆ ನೀವು ಮುಖ್ಯಮಂತ್ರಿ ಆಗಿದ್ದವರು. ಇದೀಗ ಪ್ರಧಾನ ಮಂತ್ರಿ ಆಗಿದ್ದೀರಿ. ಈ ಅವಧಿಯಲ್ಲಿ ನೀವು ಏನಾದರೂ ಕಳೆದುಕೊಂಡಿದ್ದು ಇದೆಯಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಹೌದು, ವಿಶ್ವದ ಅತೀ ಪುರಾತನ ತಮಿಳು ಭಾಷೆ ಎಂದು ಉತ್ತರಿಸಿದ್ದಾಗಿ ಪ್ರಧಾನಿ ಹೇಳಿದ್ದಾರೆ.

ಕೆಲವೊಮ್ಮೆ ಸಣ್ಣ ಪ್ರಶ್ನೆಗಳು ನಮ್ಮನ್ನು ತಬ್ಬಿಬ್ಬಾಗಿಸುತ್ತವೆ. ಅವರು ಈ ಪ್ರಶ್ನೆ ಕೇಳಿದಾಗ ನನನೂ ಅದೇ ರೀತಿಯ ಅನುಭವ ಆಯ್ತು. ನಾನು ವಿಶ್ವದ ಅತೀ ಹಳೇಯ ಭಾಷೆ ತಮಿಳು ಕಲಿಯಲು ಇನ್ನಷ್ಟು ಪ್ರಯತ್ನ ಹಾಕಬೇಕಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ತಮಿಳು ಸಂಸ್ಕೃತಿಯನ್ನು ಹಾಡಿ ಹೊಗಳಿರುವ ಅವರು, ತಮಿಳು ಸಂಸ್ಕೃತಿ ಸುಂದರ ಸಂಸ್ಕೃತಿ ಎಂದು ಬಣ್ಣಿಸಿದ್ದಾರೆ.

Comments are closed.