ರಾಷ್ಟ್ರೀಯ

ಆಧಾರ್ ಕಾರ್ಡ್ ಅಪ್ ಡೇಟ್: ಕೊರೋನಾ ಹಿನ್ನೆಲೆಯಲ್ಲಿ ಆಧಾರ್ ಕೇಂದ್ರಕ್ಕೆ ಹೋಗದೆ ಆನ್ಲೈನ್ ನಲ್ಲಿಯೇ ಬದಲಾಯಿಸಿ..!

Pinterest LinkedIn Tumblr


ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಆಧಾರ್ ವಿತರಣೆ ಸಂಸ್ಥೆ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇದೀಗ ಆಧಾರ್ ಮಾಹಿತಿಯನ್ನ ಮನೆಯಿಂದಲೇ ಬದಲಾವಣೆ ಮಾಡಲು ಅನುಮತಿ ನೀಡಿದೆ. ನೀವು ಯಾವುದೇ ಆಧಾರ್ ಕೇಂದ್ರಕ್ಕೆ ಹೋಗದೆ ಆನ್ಲೈನ್ ಮೂಲಕವೇ ಈ ಕೆಲಸ ಮಾಡಬಹುದು.

ಯುಐಡಿಎಐ ಉಲ್ಲೇಖಿಸಿರುವ ಕೆಲವು ಸೌಲಭ್ಯಗಳಿಗಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಿ ಬದಲಾವಣೆಗಳನ್ನ ಮಾಡಬೇಕಾಗುತ್ತದೆ.

ಆನ್ಲೈನ್ʼನಲ್ಲಿ ಬದಲಿಸಬಹುದಾದ ಅಂಶಗಳೇನು? ಈಗ ನೀವು ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಭಾಷೆಯನ್ನು ಆನ್ಲೈನ್ʼನಲ್ಲಿ ಅಪ್ ಡೇಟ್ ಮಾಡಬಹುದು. ಇದೇ ವೇಳೆ, ಕುಟುಂಬ/ಪೋಷಕರ ವಿವರ ಅಥವಾ ಬಯೋಮೆಟ್ರಿಕ್ ಅಪ್ ಡೇಟ್ ನಂತಹ ಇತರ ಅಪ್ ಡೇಟ್ʼಗಳಿಗಾಗಿ ನಿವಾಸಿಯು ಆಧಾರ್ ಸೇವಾ ಕೇಂದ್ರ ಅಥವಾ ದಾಖಲಾತಿ/ಅಪ್ ಡೇಟ್ ಕೇಂದ್ರಕ್ಕೆ ಭೇಟಿ ನೀಡಬೇಕು.

ನೋಂದಾಯಿತ ಮೊಬೈಲ್ ಐಡಿ ಕಡ್ಡಾಯ..!
ಆನ್ ಲೈನ್ ಆಧಾರ್ ಅಪ್ ಡೇಟ್ ರಿಕ್ವೆಸ್ಟ್ʼಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ ಎಂಬುದನ್ನು ಗಮನದಲ್ಲಿರಿಸಿ. ನೀವು ನಿಮ್ಮ ನೋಂದಾಯಿತ ಮೊಬೈಲ್ʼನಲ್ಲಿ ಆಧಾರ್ ದೃಢೀಕರಣಕ್ಕಾಗಿ ಒಟಿಪಿ ಪಡೆಯುತ್ತೀರಿ.

ದಾಖಲಾತಿ ಸಮಯದಲ್ಲಿ ಅಥವಾ ಇತ್ತೀಚಿನ ಯಶಸ್ವಿ ಪರಿಷ್ಕರಣ ವಿನಂತಿಯ ಸಮಯದಲ್ಲಿ ಘೋಷಿಸಲಾದ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನ ನೀವು ಪರಿಶೀಲಿಸಬಹುದು.

ಯುಐಡಿಎಐ ವೆಬ್ ಸೈಟ್ ನಲ್ಲಿ ಮೊಬೈಲ್ ನಂಬರ್ ವೆರಿಫೈ ಮಾಡುವುದು ಹೇಗೆ?

* UIDAI ವೆಬ್ ಸೈಟ್ ಗೆ ಹೋಗಿ
* ನಿಮ್ಮ ಆಧಾರ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಭದ್ರತಾ ಕೋಡ್ʼನಂತಹ ವಿವರಗಳನ್ನ ನೀವು ಭರ್ತಿ ಮಾಡಬೇಕು.
* ನಿಮ್ಮ ಇಮೇಲ್ ವಿಳಾಸವನ್ನ ನೀವು ಪರಿಶೀಲಿಸಲು ಬಯಸಿದರೆ, ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಭದ್ರತಾ ಕೋಡ್ ಅನ್ನ ಬೆರಳಚ್ಚಿಸಿ.
* ನಿಮ್ಮ ಇಮೇಲ್ ಐಡಿಯಲ್ಲಿ OTP ಹೊಂದಿರುವ ನೋಟಿಫಿಕೇಶನ್ ಅನ್ನ ನೀವು ತಕ್ಷಣ ಪಡೆಯುತ್ತೀರಿ.
* ಈಗ ಪುಟದ ಬಲಭಾಗದಲ್ಲಿ ಒಟಿಪಿ ಟೈಪ್ ಮಾಡಿ ಅದನ್ನು ಪರಿಶೀಲಿಸಿ.
* ನಿಮ್ಮ ವಿವರಗಳು ಯುಐಡಿಎಐನೊಂದಿಗೆ ಹೋಲಿಕೆಯಾದರೆ, ನಿಮಗೆ ಒಂದು ಸಂದೇಶ ಬರುತ್ತದೆ, ‘ಅಭಿನಂದನೆಗಳು! ನಮ್ಮ ದಾಖಲೆಗಳೊಂದಿಗೆ ಇಮೇಲ್ ID ಹೋಲಿಕೆಯಾಗುತ್ತದೆ’ ಎಂದು.

ಅದೇ ರೀತಿ, ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಬಯಸಿದರೆ, ಅದೇ ವಿಧಾನವನ್ನ ಅನುಸರಿಸಿ. ಈ ಬಾರಿ, ಇಮೇಲ್ ವಿಳಾಸದ ಬದಲು, ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡಿ, ಒಟಿಪಿ ಜನರೇಟ್ ಮಾಡಿ.

Comments are closed.