
ಲಖನೌ: ಗ್ಯಾಂಗ್ ರೇಪ್ ಆಗಿದ್ದ ಮಹಿಳೆಯೊಬ್ಬಳು ಪೊಲೀಸ್ ದೂರು ದಾಖಲಿಸಲು ಬಂದಾಗ ಪೊಲೀಸ್ ಅಧಿಕಾರಿಯೇ ಆಕೆಯನ್ನು ರೇಪ್ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜನ್ಪುರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
35 ವರ್ಷದ ಮಹಿಳೆ ನವೆಂಬರ್ 30ರಂದು ಕಾಲ್ನಡಿಗೆಯಲ್ಲಿ ಮದನ್ಪುರಕ್ಕೆ ಹೋಗುತ್ತಿದ್ದಾಗ, ಐದು ಪುರುಷರು ಕಾರಿನಲ್ಲಿ ಬಂದು ಆಕೆಯನ್ನು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿ ಆಕೆಯನ್ನು ಎಳೆದೊಯ್ದು ಹತ್ತಿರದ ಮೈದಾನದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ವಿಚಾರವಾಗಿ ದೂರು ನೀಡಲೆಂದು ಮಹಿಳೆ ಜಲಾಲಾಬಾದ್ ಪೊಲೀಸ್ ಠಾಣೆಗೆ ಹೋಗಿದ್ದಳು. ಆಗ ಅಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಆಕೆಯನ್ನು ಕೋಣೆಗೆ ಕರೆದೊಯ್ದು, ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗ ಹಿನ್ನೆಲೆಯಲ್ಲಿ ಮಹಿಳೆ ಎಡಿಜಿ ಅವಿನಾಶ್ ಚಂದ್ರ ಅವರನ್ನು ಭೇಟಿಯಾಗಿ ದೂರು ದಾಖಲಿಸಿದ್ದಾಳೆ.
ಈ ಘಟನೆಯ ಬಗ್ಗೆ ತನಿಖೆ ನಡೆಸಲು ಅವಿನಾಶ್ ಅವರು ಆದೇಶಿಸಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಬ್ರಹ್ಮಪಾಲ್ ಸಿಂಗ್ ಅವರನ್ನು ತನಿಖೆ ನಡೆಸಲು ತಿಳಿಸಲಾಗಿದೆ ಎನ್ನಲಾಗಿದೆ. ಮಹಿಳೆಯ ಆರೋಪ ಸತ್ಯವೆಂದು ಕಂಡುಬಂದಲ್ಲಿ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ.
Comments are closed.