ರಾಷ್ಟ್ರೀಯ

4 ಲಕ್ಷ ರೂ. ದುಡ್ಡು ಇರುವ ಬ್ಯಾಗ್ ಎತ್ತಿಕೊಂಡು ಮರವೇರಿದ ಕೋತಿ!

Pinterest LinkedIn Tumblr


ಸೀತಾಪುರ್(ಉತ್ತರಪ್ರದೇಶ): ದಿಢೀರನೆ ಬಂದು ಕಪಿಯೊಂದು ಹಣ ತುಂಬಿದ್ದ ಬ್ಯಾಗ್ ಅನ್ನು ಎತ್ತಿಕೊಂಡು ಹೋಗಿ ರಿಜಿಸ್ಟ್ರಾರ್(ನೋಂದಣಿ ಕಚೇರಿ) ಕಚೇರಿ ಹೊರಗಿನ ಮರವೇರಿ ನೋಟುಗಳನ್ನು ಎಸೆದಿರುವ ಘಟನೆ ಉತ್ತರಪ್ರದೇಶದ ಸೀತಾಪುರ್ ಎಂಬಲ್ಲಿ ನಡೆದಿದೆ.

ನೋಡ, ನೋಡುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿ ನೋಟು ಗಾಳಿಯಲ್ಲಿ ಹಾರಾಡುತ್ತ ನೋಂದಣಿ ಕಚೇರಿ ಸುತ್ತಮುತ್ತ ಬೀಳುತ್ತಿರುವುದನ್ನು ಕಂಡು ಏನಿದು ಎಂದು ಕುತೂಹಲ, ಅಚ್ಚರಿಯಿಂದ ಕಂಡವರಿಗೆ ಕಪಿ ಚೇಷ್ಟೆ ಬೆಳಕಿಗೆ ಬಂದಿತ್ತು.

ಸೀತಾಪುರ್ ನ ವಿಕಾಸ್ ಭವನದ ರಿಜಿಸ್ಟ್ರಿ ಕಚೇರಿ ಹೊರಭಾಗದಲ್ಲಿ ಹಿರಿಯ ವ್ಯಕ್ತಿಯೊಬ್ಬರು 4 ಲಕ್ಷ ರೂಪಾಯಿ ಹೊಂದಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದರು. ಆಗ ದಿಢೀರ್ ಆಗಿ ಬಂದ ಮಂಗ ಬ್ಯಾಗ್ ಎತ್ತಿಕೊಂಡು ಮರ ಏರಿ ಕುಳಿತುಕೊಂಡು ಬಿಟ್ಟಿತ್ತು. ನಂತರ ಸುಮಾರು 10, 12 ಸಾವಿರ ರೂಪಾಯಿಗಳಷ್ಟು ನೋಟುಗಳನ್ನು ಕೆಳಗೆ ಎಸೆದಿತ್ತು ಎಂದು ವರದಿ ವಿವರಿಸಿದೆ.

ಪುಕ್ಕಟ್ಟೆ ಸಿಕ್ಕ ಹಣ ಎಂದು ಗುಂಪುಗೂಡಿದ ಜನ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡಿದ್ದು, ಕೊನೆಗೂ ಏನೆಲ್ಲಾ ಪ್ರಯತ್ನ ಮಾಡಿದ ನಂತರ ಮಂಗ ಬ್ಯಾಗ್ ಅನ್ನು ಕೆಳಕ್ಕೆ ಎಸೆದಿರುವುದಾಗಿ ವರದಿ ತಿಳಿಸಿದೆ.

Comments are closed.