ರಾಷ್ಟ್ರೀಯ

ಪಾಕಿಸ್ತಾನಕ್ಕಿಂತ ನಮ್ಮ ದೇಶದಲ್ಲಿಯೇ ಅಧಿಕ ಮುಸ್ಲಿಂರಿದ್ದು, ಅವರ ಅಲ್ಪಸಂಖ್ಯಾತ ಸ್ಥಾನಮಾನ ರದ್ದಾಗಲಿ: ಸಂಸದ ಸಾಕ್ಷಿ ಮಹಾರಾಜ್

Pinterest LinkedIn Tumblr


ಕಾನ್ಪುರ: ಪಾಕ್ ಕ್ಕಿಂತ ನಮ್ಮ ದೇಶದಲ್ಲಿಯೇ ಅಧಿಕ ಮುಸ್ಲಿಂ ಜನಸಂಖ್ಯೆ ಇದೆ, ಆದ್ದರಿಂದ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನವನ್ನು ತಕ್ಷಣದಿಂದ ರದ್ದುಗೊಳಿಸಬೇಕು ಎಂದು ಉನ್ನಾವೊದ ಭಾರತೀಯ ಜನತಾ ಪಕ್ಷದ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವಲ್ಲಿಯೇ ಹೆಸರುವಾಸಿಯಾಗಿರುವ ಸಾಕ್ಷಿ ಮಹಾರಾಜ್ ಇದೀಗ ಈ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಉನ್ನಾವೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಈ ವಿಷಯ ಹೇಳಿದ್ದಾರೆ. ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತು ಮಾತನಾಡಿದ ಸಾಕ್ಷಿ, ‘ಹೆಚ್ಚುತ್ತಿರುವ ಜನಸಂಖ್ಯೆಯನ್ನು ಪರೀಕ್ಷಿಸಲು ಶೀಘ್ರದಲ್ಲೇ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.

ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿನಾಕಾರಣ ರೈತರ ದಿಕ್ಕು ತಪ್ಪಿಸುವ ಯತ್ನಗಳು ನಡೆಯುತ್ತಿವೆ. ಕೃಷಿ ಕಾನೂನುಗಳ ಬಗ್ಗೆ ಮಾತನಾಡಲು ಸರ್ಕಾರ ಸಿದ್ಧವಾಗಿದ್ದರೂ ಕೇಳಲು ರೈತರು ಮನಸ್ಸು ಮಾಡುತ್ತಿಲ್ಲ ಎಂದರು.

ಜತೆಗೆ, ಅನವಶ್ಯಕವಾಗಿ ಕಾಂಗ್ರೆಸ್​ ರೈತರ ಹಾದಿ ತಪ್ಪಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಕತ್ತಿದ್ದರೆ ಕಾಂಗ್ರೆಸ್​ ಹಾಗೂ ಕೃಷಿ ವಿರೋಧಿಸುತ್ತಿರುವವರು ಅಯೋಧ್ಯೆ ವಿಷಯದಂತೆಯೇ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಿ. ಅದನ್ನು ಬಿಟ್ಟು ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು ಎಂದರು. ಮುಗ್ಧ ರೈತರ ಭುಜಗಳ ಮೇಲೆ ಬಂದೂಕುಗಳನ್ನು ಹಾರಿಸಿ ಮಜ ನೋಡುವ ಕೆಲಸ ಮಾಡಬಾರದು ಎಂದರು.

2011ರ ಜನಗಣತಿಯ ಅನ್ವಯ (ಅಂದರೆ 10 ವರ್ಷಗಳ ಹಿಂದಿನ ಜನಗಣತಿಯಂತೆ) ಭಾರತದಲ್ಲಿ ಮುಸ್ಲಿಮರ ಸಂಖ್ಯೆ 1.72 ಕೋಟಿ ಜನರು ಮುಸ್ಲಿಮರಾಗಿದ್ದಾರೆ. ಭಾರತದಲ್ಲಿ ಶೇ. 14.2ರಷ್ಟು ಮಂದಿ ಮುಸ್ಲಿಮರಿದ್ದಾರೆ.

Comments are closed.