ರಾಷ್ಟ್ರೀಯ

ಮೆದುಳಿನ ಗೆಡ್ಡೆಯ ಶಸ್ತ್ರಚಿಕಿತ್ಸೆ ಸಂದರ್ಭ ಪಿಯಾನೋ ನುಡಿಸಿದ ಬಾಲಕಿ

Pinterest LinkedIn Tumblr


ಗ್ವಾಲಿಯರ್ (ಮಧ್ಯಪ್ರದೇಶ): ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಬಾಲಕಿಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಹೊಸ ವಿಧಾನದ ಆಪರೇಷನ್ ವೇಳೆ ಬಾಲಕಿ ಪಿಯಾನೋ ನುಡಿಸುತ್ತಿರುವುದು ಹೊಸತನಕ್ಕೆ ಸಾಕ್ಷಿಯಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನ ಡಾಕ್ಟರ್ಸ್ ಬಿರ್ಲಾ ಆಸ್ಪತ್ರೆಯಲ್ಲಿ, ಕ್ರಾನಿಯೊಟೊಮಿ (craniotomy) ಎಂಬ ಹೊಸ ವಿಧಾನದ ಭಾಗವಾಗಿ ಇಂತಹದೊಂದು ಪ್ರಯೋಗ ಮಾಡಲಾಗಿದೆ.

ಈ ಆಪರೇಷನ್ ಅತ್ಯಂತ ಕ್ಲಿಷ್ಟಕರವಾದದ್ದು, ಹಾಗಾಗಿ ಸಂಗೀತ ವಾದ್ಯದ ಮೂಲಕ ರೋಗಿಯ ಮನಸ್ಸನ್ನು ಬೇರೆಡೆಗೆ ತಿರುಗಿಸುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ನಾವು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೇಳಿದ್ದೇವೆ. ಆದ್ದರಿಂದ ನಾವು ಅದೇ ರೀತಿ ಅನುಸರಿಸಿದ್ದೇವೆ. ಇದರ ಪರಿಣಾಮವಾಗಿ ಬಾಲಕಿಯ ಆರೋಗ್ಯ ಸ್ಥಿತಿ ಚೆನ್ನಾಗಿಯೇ ಇದೆ ಎಂದು ಡಾಕ್ಟರ್ ಅಭಿಷೇಕ್ ಚೌಹಾಣ್ ತಿಳಿಸಿದರು.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬಾನ್ಮೋರ್ ಪಟ್ಟಣದ ಒಂಬತ್ತರ ಹರೆಯದ ಸೌಮ್ಯಾ ಎಂಬಾಕೆ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದರು. ಈಕೆಗೆ ಅಪಸ್ಮಾರ ಕಾಯಿಲೆಯು ಇದೆ.

ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಅನಸ್ತೇಶಿಯಾ (ಅರಿವಳಿಕೆ) ನೀಡಿ ಆಪರೇಷನ್ ಮಾಡಲಾಗುತ್ತದೆ. ಆದರೆ ಸೌಮ್ಯಾಳನ್ನು ಸಂಪೂರ್ಣ ಅನಸ್ತೇಶಿಯಾಗೆ ಒಳಪಡಿಸದೆ ಮೆದುಳಿನಿಂದ ಗೆಡ್ಡೆ ಹೊರತೆಗೆಯಲಾಗಿದೆ. ಆಪರೇಷನ್ ವೇಳೆ ಸೌಮ್ಯಾ ಪಿಯಾನೋ ನುಡಿಸುತ್ತಲೇ ಇದ್ದಳು ಎಂದು ವೈದ್ಯರು ವಿವರಿಸಿದರು.

Comments are closed.