ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ವೃದ್ಧನೊಬ್ಬ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದು, ತಾನು ಮೆಕಾನಿಕಲ್ ಇಂಜಿನಿಯರ್ ಆಗಿದ್ದೆ ಎಂದು ಹೇಳಿಕೊಂಡಿದ್ದಾನೆ. 90 ವರ್ಷದ ಸುರೇಂದ್ರ ವಸಿಷ್ಠ ಎಂಬಾತನನ್ನ ಗ್ವಾಲಿಯರ್ನ ರಸ್ತೆಬದಿಯಲ್ಲಿ ಎನ್ಜಿಓವೊಂದು ರಕ್ಷಣೆ ಮಾಡಿದೆ.
ಬಸ್ ಸ್ಟ್ಯಾಂಡ್ ಬಳಿ ಕರುಣಾಜನಕ ಸ್ಥಿತಿಯಲ್ಲಿದ್ದ ಸುರೇಂದ್ರರನ್ನ ನೋಡಿದೆವು. ನಾವು ಅವರನ್ನ ಮಾತನಾಡಿಸಿದಾಗ ಅವರು ಇಂಗ್ಲೀಷ್ನಲ್ಲಿ ಮಾತನಾಡಿದ್ರು. ಬಳಿಕ ಅವರನ್ನ ನಮ್ಮ ಆಶ್ರಮಕ್ಕೆ ಕರೆತಂದೆವು. ಅವರು ತಾನು ಕಾನ್ಪುರದ ಐಐಟಿ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಸುರೇಂದ್ರರ ಸಂಬಂಧಿಕರಿಗಾಗಿ ಹುಡುಕಾಡುತ್ತಿದ್ದೇವೆ ಅಂತಾ ಎನ್ಜಿಓದ ವಿಕಾಶ್ ಗೋಸ್ವಾನಿ ಸದಾನ್ ಹೇಳಿದ್ದಾರೆ.