ರಾಷ್ಟ್ರೀಯ

ಪ್ರಿಯಕರನ ಪತ್ನಿಯ ಕೂದಲು ಕತ್ತರಿಸಿ, ಮುಖಕ್ಕೆ ಫೆವಿಕ್ವಿಕ್ ಹಚ್ಚಿದ ಮಾಜಿ ಪ್ರೇಯಸಿ

Pinterest LinkedIn Tumblr


ಪಾಟ್ನಾ: ಪ್ರಿಯಕರ ಬೇರೆ ಯುವತಿಯೊಂದಿಗೆ ಮದುವೆ ಆಗಿದ್ದಕ್ಕೆ ನೊಂದ ಯುವತಿ ಆತನ ಪತ್ನಿಯ ಕೂದಲು ಕತ್ತರಿಸಿ, ಮುಖಕ್ಕೆ ಫೆವಿಕ್ವಿಕ್ ಹಚ್ಚಿರುವ ಘಟನೆ ಬಿಹಾರದ ನಳಂದಾದ ಮೋರಾ ತಾಲಾಬ್ ಗ್ರಾಮದಲ್ಲಿ ನಡೆದಿದೆ.

ಕುಟುಂಬಸ್ಥರು ಯುವತಿಯನ್ನ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಡಿಸೆಂಬರ್ 1ರಂದು ಗೋಪಾಲ್ ರಾಮ್ ಮದುವೆ ನಡೆದಿತ್ತು. ಮದುವೆಗೂ ಮುನ್ನ ಗೋಪಾಲ್ ಬೇರೆ ಯುವತಿಯನ್ನ ಪ್ರೀತಿಸುತ್ತಿದ್ದನು. ಆದ್ರೆ ಆಕೆಗೆ ಕೈ ಕೊಟ್ಟಿದ್ದ ಗೋಪಾಲ್ ಕುಟುಂಬಸ್ಥರ ಇಚ್ಛೆಯಂತೆ ಮದುವೆ ಆಗಿದ್ದನು. ಇದರಿಂದ ಗೋಪಾಲ್ ಗೆಳತಿ ಕೋಪಗೊಂಡಿದ್ದಳು.

ಡಿಸೆಂಬರ್ 1ರ ರಾತ್ರಿ ಮದುವೆ ಮನೆಗೆ ಯುವತಿ ಎಂಟ್ರಿ ಕೊಟ್ಟಿದ್ದಳು. ಎರಡು ದಿನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಟುಂಬಸ್ಥರು ಗಾಢ ನಿದ್ರೆಗೆ ಜಾರಿದ್ದರು. ವಧು ಕುಳಿತಿದ್ದ ಕೋಣೆಗೆ ಎಂಟ್ರಿ ಕೊಟ್ಟ ಯುವತಿ ಮೊದಲಿಗೆ ಕೂದಲು ಕತ್ತರಿಸಿದ್ದಾಳೆ. ನಂತ್ರ ಆಕೆಯ ಕಣ್ಣು ಸೇರಿದಂತೆ ಮುಖಕ್ಕೆ ಫೆವಿಕ್ವಿಕ್ ಹಚ್ಚಿದ್ದಾಳೆ. ಕಣ್ಣಿಗೆ ಫೆವಿಕ್ವಿಕ್ ಬೀಳುತ್ತಿದ್ದಂತೆ ಎಚ್ಚರಗೊಂಡ ವಧು ನೋವಿನಿಂದ ಕಿರುಚಿದ್ದಾಳೆ. ವಧುವಿನ ಧ್ವನಿ ಕೇಳುತ್ತಿದ್ದಂತೆ ಬಂದ ಮನೆಯವರು ಯುವತಿಯನ್ನ ಹಿಡಿದಿದ್ದಾರೆ.

Comments are closed.