ರಾಷ್ಟ್ರೀಯ

ನಕ್ಸಲರ ಅಟ್ಟಹಾಸ; ಸಿಆರ್’ಪಿಎಫ್ ಅಧಿಕಾರಿ ಹುತಾತ್ಮ, 10 ಮಂದಿ ಯೋಧರಿಗೆ ಗಾಯ

Pinterest LinkedIn Tumblr

ಸುಕ್ಮಾ: ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯಲ್ಲಿ ಓರ್ವ ಸಿಆರ್​​ಪಿಎಫ್​ ಯೋಧ ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.

ಶನಿವಾರ ರಾತ್ರಿ ಸುಕ್ಮಾ ಜಿಲ್ಲೆಯ ತಾಲ್ಮೆತಲ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸಿ, ಐಇಡಿ ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಸಿಆರ್​ಪಿಎಫ್​ ಯೋಧ ಸಾವನ್ನಪ್ಪಿದ್ದು, 10 ಯೋಧರಿಗೆ ಗಂಭೀರ ಗಾಯಗಳಾಗಿವೆ.

ಸಿಆರ್’ಪಿಎಫ್ ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್ (ಕೋಬ್ರಾ) 206 ಬೆಟಾಲಿಯನ್ ಸಹಾಯಕ ಕಮಾಂಡೆಂಟ್ ನಿತಿನ್ ಭಲೇರಾವ್ ಅವರು ಸುಕ್ಮಾದ ತಾಡ್ಮೆಟ್ಲಾ ಪ್ರದೇಶದ ಬಳಿ ನಡೆದ ಸ್ಫೋಟದಲ್ಲಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಈ ನಡುವೆ ಘಟನೆ ವೇಳೆ ಸ್ಥಳದಲ್ಲಿದ್ದ 9 ಮಂದಿ ಯೋಧರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಂತಲ್ ನಾರ್ ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿ ಸಿಆರ್’ಪಿಎಫ್ ಯೋಧರ ತಂಡ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ತೆರಳಿದ್ದರು. ಈ ವೇಳೆ ನಕ್ಸಲರು ಐಇಡಿ ಸ್ಫೋಟಿಸಿದ್ದು, ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆ. ಉಳಿದವರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಾಗೊಂಡಿದ್ದ 10 ಮಂದಿ ಯೋಧನರ್ನು ಏರ್ ಲಿಫ್ಟ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ವರದಿಗಳು ತಿಳಿಸಿವೆ.

Comments are closed.