ರಾಷ್ಟ್ರೀಯ

ಅಮಿತ್ ಶಾರ ನಿದ್ದೆಗೆಡಿಸಿದ “ಎಣ್ಣೆ” ಸಮಸ್ಯೆ…

Pinterest LinkedIn Tumblr


ಕೊರೋನಾ ಲಾಕ್​ಡೌನ್​​ ನಂತರ ಜನಸಾಮಾನ್ಯರ ಡೈಲಿ ಲೈಫ್​ ದುಬಾರಿ ಆಗ್ತಿದೆ. ಇದೀಗ ಅಡುಗೆ ಎಣ್ಣೆಗಳ ರೇಟ್​ ಶೇಕಡಾ 30ರಷ್ಟು ಏರಿಕೆ ಆಗಿದೆ. ಕಳೆದ ವರ್ಷಕ್ಕೆ ಸೋಲಿಸಿದರೆ ಕುಕ್ಕಿಂಗ್​ ಆಯಿಲ್​ ಜನರ ಜೇಬು ಸುಡ್ತಿದೆ. ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ ಎಣ್ಣೆ, ಸೋಯಾಬಿನ್​​​​​​, ಸೂರ್ಯಕಾಂತಿ ಎಣ್ಣೆ, ಪಾಮ್​​​​​ ಆಯಿಲ್​​ ದರ ಏರುತ್ತಲೇ ಇದೆ. ದರ ಏರುತ್ತಿದ್ದಂತೆ ಗೃಹ ಸಚಿವ ಅಮಿತ್​​ ಶಾ ಉನ್ನತ ಸಚಿವರ ಜತೆ ಸರಣಿ ಮೀಟಿಂಗ್​​ ನಡೆಸಿದ್ದಾರೆ. ಅಡುಗೆ ಎಣ್ಣೆ ರೇಟ್​ ಹೆಚ್ಚಾದ್ರೆ ಸರ್ಕಾರದ ಮೇಲೆ ಎಫೆಕ್ಟ್​​​ ಆಗೋ ಭೀತಿ ಶಾ ಅವರನ್ನು ಕಾಡಿದೆ. ಈರುಳ್ಳಿ ಜೊತೆಗೆ ಅಡುಗೆ ಎಣ್ಣೆ ದರ ಏರಿಕೆಯೂ ವಿಪಕ್ಷಗಳ ಹೋರಾಟಕ್ಕೆ ಅಸ್ತ್ರವಾಗೋ ಆತಂಕ ಮನೆ ಮಾಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಅಮಿತ್​ ಶಾ ಮಾಹಿತಿ ಪಡೆದುಕೊಂಡಿದ್ದಾರೆ. ವಿದೇಶದಿಂದ ಆಮದಾಗುವ ಎಣ್ಣೆ ಮೇಲೆ ಭಾರತ ಹೆಚ್ಚು ಅವಲಂಬಿಸಿರೋದೆ ಇದಕ್ಕೆ ಕಾರಣ.

ಯಾವ ಎಣ್ಣೆ, ಎಷ್ಟು ರೇಟ್​​​..!
ಎಣ್ಣೆ 2019
ಕಡಲೆಕಾಯಿ ಎಣ್ಣೆ- 140 ರೂ.
ಸಾಸಿವೆ ಎಣ್ಣೆ – 105 ರೂ.
ವನಸ್ಪತಿ ಎಣ್ಣೆ-90 ರೂ.
ಸೋಯಾಬಿನ್ ಎಣ್ಣೆ- 95 ರೂ.
ಸೂರ್ಯಕಾಂತಿ ಎಣ್ಣೆ- 105 ರೂ.
ಪಾಮ್​​​​ ಆಯಿಲ್- 75 ರೂ.
……………….
2020
ಕಡಲೆಕಾಯಿ ಎಣ್ಣೆ- 170 ರೂ.
ಸಾಸಿವೆ ಎಣ್ಣೆ – 130 ರೂ.
ವನಸ್ಪತಿ ಎಣ್ಣೆ-115 ರೂ.
ಸೋಯಾಬಿನ್ ಎಣ್ಣೆ​​- 116 ರೂ.
ಸೂರ್ಯಕಾಂತಿ ಎಣ್ಣೆ – 180 ರೂ.
ಪಾಮ್​​​​ ಆಯಿಲ್​​ – 110 ರೂ.

Comments are closed.