ರಾಷ್ಟ್ರೀಯ

ಜನವರಿಯಿಂದ ದೇಶಾದ್ಯಂತ ಕೊರೊನಾ ನಿಯಂತ್ರಣ ಲಸಿಕೆ ಹಂಚಿಕೆ ಹಿನ್ನೆಲೆ; ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ಮುಂದಿನ ಜನವರಿಯಿಂದ ದೇಶಾದ್ಯಂತ ಕೊರೊನಾ ನಿಯಂತ್ರಣ ಲಸಿಕೆ ಹಂಚಿಕೆ ಆರಂಭಿಸುವ ಸುಳಿವನ್ನು ಲಸಿಕೆ ತಯಾರಿಕೆ ಕಂಪನಿಗಳು ನೀಡಿರುವ ಹಿನ್ನೆಲೆಯಲ್ಲಿ ಲಸಿಕೆ ಹಂಚಿಕೆ ಕಾರ್ಯತಂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರಿಶೀಲನಾ ಸಭೆ ನಡೆಸಿ ಚರ್ಚಿಸಿದರು.

ನವದೆಹಲಿ: ಮುಂಬರುವ ಜನವರಿ ತಿಂಗಳಿನಲ್ಲಿ ದೇಶದಾದ್ಯಂತ ಕೊರೋನಾ ನಿಯಂತ್ರಿಸಲು ಲಸಿಕೆ ಆರಂಭಿಸಲಾಗುತ್ತದೆ ಎಂಬ ಸುಳಿವನ್ನು ಲಸಿಕೆ ತಯಾರಿಕೆ ಕಂಪನಿಗಳು ನೀಡಿರುವ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಲಸಿಕೆ ಹಂಚಿಕೆ ಕಾರ್ಯತಂತ್ರದ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಕೊರೋನಾ ಸೋಂಕಿತರಿಗೆ ಯಾವ ಮಾನದಂಡದ ಮೇಲೆ ಲಸಿಕೆ ನೀಡಬೇಕು. ಯಾವೆಲ್ಲಾ ನಾಗರೀಕರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ಅಲ್ಲದೆ, ಅಭಿವೃದ್ಧಿ, ನಿಯಂತ್ರಣ ಮತ್ತು ಅನುಮೋದನೆ ಹಾಗೂ ಸಂಗ್ರಹಣೆಯ ಪ್ರಕ್ರಿಯೆಗಳ ಬಗ್ಗೆ ನಡೆಲಾಗಿದೆ ಎಂದು ತಿಳಿದುಬಂದಿದೆ.

ವಿಶ್ವದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಲಸಿಕೆ ತಯಾರಿಕೆ ಸಾಮರ್ಥ್ಯಯುಳ್ಳ ಕಂಪನಿ ಎನಿಸಿರುವ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯಸ್ಥ ಅದಾರ್‌ ಪೂನಾವಾಲ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು.

ಆಕ್ಸ್‌ಫರ್ಡ್‌‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊರೊನಾ ತಡೆ ಲಸಿಕೆಯ ಕೋಟ್ಯಂತರ ಡೋಸ್‌ಗಳನ್ನು ಈಗಾಗಲೇ ಉತ್ಪಾದನೆ ಮಾಡಿದೆ ಎಂದು ಹೇಳಿದ್ದರು. ಜೊತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಲಸಿಕೆಯ ಬೆಲೆ ರೂ.500-600 ಇದ್ದು, ಕೇಂದ್ರ ಸರಕಾರಕ್ಕೆ ಇನ್ನೂ ಕಡಿಮೆ ಬೆಲೆಯಲ್ಲಿ ಲಸಿಕೆ ಪೂರೈಕೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

Comments are closed.