ರಾಷ್ಟ್ರೀಯ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ನೋಟಾ’ ಮತಗಳ ಸಂಖ್ಯೆ ಎಷ್ಟು ಗೊತ್ತಾ?

Pinterest LinkedIn Tumblr


ದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಮತದಾರರು ‘ನೋಟಾ(NOTA)’ ವೋಟ್ ಗಳನ್ನ ಹಾಕಿದ್ದಾರೆ ಎಂದು ಚುನಾವಣಾ ಆಯೋಗ ವರದಿ ಬಿಡುಗಡೆ ಮಾಡಿದೆ.

ಬಿಹಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 7,06,252 ಮತದಾರರು (ಶೇ 1.7) ನಾವು ಯಾವುದೇ ಅಭ್ಯರ್ಥಿಗಳಿಗೆ ಮತಚಲಾಯಿಸುವುದಿಲ್ಲ ಎಂದು ಸೂಚಿಸುವ ‘ನೋಟಾ’ವನ್ನು ಬಟನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಿಹಾರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. 4 ಕೋಟಿ ಮತದಾರರು ಮತಚಲಾಯಿಸಿದ್ದರು. ಒಟ್ಟು ಮತದಾರರ ಸಂಖ್ಯೆ 7.3 ಕೋಟಿ. ಚಲಾವಣೆಯಾಗಿದ್ದು ಶೇ 57.09ರಷ್ಟು ಮತಗಳು. ಇದರಲ್ಲಿ ಶೇ 1.7 ರಷ್ಟು ಮತದಾರರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ(NDA) ಸರಳ ಬಹುಮತದೊಂದಿಗೆ ಪುನಃ ಅಧಿಕಾರ ನಡೆಸಲು ಅವಕಾಶ ಪಡೆದುಕೊಂಡಿದೆ.

243 ಸದಸ್ಯರ ಪೈಕಿ 125 ಸ್ಥಾನಗಳನ್ನು ಎನ್‌ಡಿಎ ಒಕ್ಕೂಟ ಗೆದ್ದುಕೊಂಡರೆ, ಆರ್‌ಜೆಡಿ(RJD) ನೇತೃತ್ವದ ಮಹಾ ಘಟಬಂಧನ್‌ 110 ಸ್ಥಾನ ಪಡೆದು ವಿರೋಧ ಪಕ್ಷವಾಗಿದೆ. ಸತತ ನಾಲ್ಕನೇ ಅವಧಿಗೆ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗುವತ್ತ ಹೆಜ್ಜೆ ಹಾಕಿದ್ದಾರೆ.

Comments are closed.