ರಾಷ್ಟ್ರೀಯ

ಮಹಿಳೆಯರಿಂದ ನಡುರಸ್ತೆಯಲ್ಲೇ ಕಾಂಗ್ರೆಸ್ ನಾಯಕನಿಗೆ ಚಪ್ಪಲಿಯೇಟು!

Pinterest LinkedIn Tumblr


ಲಖನೌ: ಉತ್ತರಪ್ರದೇಶದ ಜಲೌನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನನ್ನು ಮಹಿಳೆಯರಿಬ್ಬರು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯರು ಅನುಜ್ ಮಿಶ್ರಾ ತಮ್ಮ ಜೊತೆ ಮೊಬೈಲ್ ನಲ್ಲಿ ಅಶ್ಲೀಲವಾಗಿ ಮಾಡಿದ್ದಾರೆ ಎಂದು ಆರೋಪಿ ರಸ್ತೆಯಲ್ಲೇ ಬಟ್ಟೆಯನ್ನು ಹರಿದು ಚಪ್ಪಲಿಯಿಂದ ಹೊಡೆದು ಥಳಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅನುಜ್ ಮಿಶ್ರಾ ತಮ್ಮ ಅಂಗಡಿಯಲ್ಲಿ ಈ ಮಹಿಳೆಯರು ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿ ಹಣ ಪಾವತಿಸಿಲ್ಲ. ಹಣ ನೀಡುವಂತೆ ಹೇಳಿದ್ದಕ್ಕೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಹಲ್ಲೆಗೆ ಸಂಬಂಧಿಸಿದಂತೆ ಅನುಜ್ ಮಹಿಳೆಯರಿಬ್ಬರ ವಿರುದ್ಧ ದೂರು ದಾಖಲಿಸಿದ್ದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

Comments are closed.