ರಾಷ್ಟ್ರೀಯ

ಲಾಕ್ ಡೌನ್: 700 ಕಿಮೀ ಉದ್ದ ಟ್ರಾಫಿಕ್ ಜಾಮ್!

Pinterest LinkedIn Tumblr


ನವದೆಹಲಿ: ಫ್ರಾನ್ಸ್‌ನ 2ನೇ ರಾಷ್ಟ್ರೀಯ ಲಾಕ್‌ಡೌನ್ ಆರಂಭವಾಗುತ್ತಿದ್ದಂತೆ ಪ್ಯಾರಿಸ್ ತನ್ನ ರಸ್ತೆಗಳು ದಾಖಲೆಯ ಮಟ್ಟದಲ್ಲಿ ದಟ್ಟಣೆಯನ್ನು ಕಂಡಿವೆ.

ಪ್ಯಾರಿಸ್ ನಲ್ಲಿ ದಟ್ಟಣೆಯನ್ನು ಅಳೆಯುವ ಸೈಟಾಡಿನ್‌ನಿಂದ ಡೌನ್‌ಲೋಡ್ ಮಾಡಲಾದ ಡೇಟಾ, ಗುರುವಾರ ರಾತ್ರಿ 9 ಗಂಟೆಯ ಮೊದಲು ಫ್ರೆಂಚ್ ರಾಜಧಾನಿಯಲ್ಲಿ 700 ಕಿಲೋಮೀಟರ್‌ಗಿಂತ ಹೆಚ್ಚಿನ ದಟ್ಟಣೆ ಇದೆ ಎಂದು ತೋರಿಸಿದೆ, ಇದು ಪ್ರಾದೇಶಿಕ ಕರ್ಫ್ಯೂಮತ್ತು ಹೊಸ ರಾಷ್ಟ್ರೀಯ ಲಾಕ್‌ಡೌನ್‌ ನಿಂದ ಉಂಟಾಗಿದೆ ಎನ್ನಲಾಗಿದೆ.ರಾಜಧಾನಿಯಲ್ಲಿ ಸಂಜೆ 6 ರಿಂದ 7 ರವರೆಗೆ ಸಂಚಾರ ಹೆಚ್ಚಾಗಿದೆ.

ಸುದೀರ್ಘ ಟ್ರಾಫಿಕ್ ಜಾಮ್ ನ ವೀಡಿಯೊಗಳು ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.ಇಷ್ಟು ಉದ್ದಾದ ಟ್ರಾಫಿಕ್ ಜಾಮ್ ಕಂಡು ಸಾಮಾಜಿಕ ಜಾಲತಾಣದಲ್ಲಿ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಫ್ರಾನ್ಸ್‌ನ ಎರಡನೇ ಲಾಕ್‌ಡೌನ್ ಕನಿಷ್ಠ ಡಿಸೆಂಬರ್ 1 ರವರೆಗೆ ಜನರನ್ನು ತಮ್ಮ ಮನೆಗಳಿಗೆ ನಿರ್ಬಂಧಿಸುತ್ತದೆ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಬುಧವಾರ ಭಾಷಣದಲ್ಲಿ ಘೋಷಿಸಿದರು,ಈ ಭಾಷಣವನ್ನು ಸುಮಾರು 33 ಮಿಲಿಯನ್ ಜನರು ವಿಕ್ಷಿಸಿದ್ದಾರೆ.ಫ್ರಾನ್ಸ್ ನ ಎಲ್ಲ 67 ಮಿಲಿಯನ್ ಜನರು ಮನೆಯಲ್ಲಿಯೇ ಉಳಿಯಲು ಆದೇಶಿಸಿದ್ದಾರೆ.

Comments are closed.