ರಾಷ್ಟ್ರೀಯ

ಪಡಿತರ ಚೀಟಿ ಹೊಂದಿದವರಿಗೆ ಗೋವಾ ಸರಕಾರದಿಂದ ಈರುಳ್ಳಿ ಕೊಡುಗೆ!

Pinterest LinkedIn Tumblr


ಪಣಜಿ: 3.5 ಲಕ್ಷ ರೇಷನ್ ‌ಕಾರ್ಡ್‌ದಾರರಿಗೆ 1 ಕೆಜಿ ಈರುಳ್ಳಿಯನ್ನು 32 ರೂ. ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಗೋವಾ ಸರಕಾರ ನಿರ್ಧರಿಸಿದೆ.

ಗೋವಾದ ಸಚಿವ ಸಂಪುಟ ಬುಧವಾರ ಈ ಕುರಿತ ಪ್ರಸ್ತಾಪವನ್ನು ಅನುಮೋದಿಸಿದೆ. ನಾಸಿಕ್‌ ಮೂಲದ ನಫೆಡ್‌ಗೆ 1,045 ಮೆಟ್ರಿಕ್‌ ಟನ್‌ ಈರುಳ್ಳಿ ಖರೀದಿ ಬಗ್ಗೆ ಗೋವಾ ಸರಕಾರ ಈಗಾಗಲೇ ಪ್ರಸ್ತಾಪ ಸಲ್ಲಿಸಿದೆ. ಇದನ್ನು ಸಬ್ಸಿಡಿ ದರದಲ್ಲಿ ಎಲ್ಲ ರೇಷನ್ ‌ಕಾರ್ಡ್‌ದಾರರಿಗೆ ವಿತರಿಸಲಾಗುವುದು ಎಂದು ರಾಜ್ಯ ನಾಗರಿಕ ಪೂರೈಕೆ ಇಲಾಖೆಯ ನಿರ್ದೇಶಕ ಸಿದ್ಧಿವಿನಾಯಕ ನಾಯಕ್‌ ತಿಳಿಸಿದ್ದಾರೆ.

ಒಟ್ಟು 3.5 ಲಕ್ಷ ರೇಷನ್‌ಕಾರ್ಡ್‌ದಾರರಿಗೆ ಕೆ.ಜಿಗೆ 32 ರೂ. ದರದಲ್ಲಿ 3 ಕೆ.ಜಿ ಈರುಳ್ಳಿಯನ್ನು ವಿತರಿಸಲಾಗುವುದು. ಈರುಳ್ಳಿ ಬಂದೊಡನೆ ಜಾಹೀರಾತು, ಎಸ್ಸೆಮ್ಮೆಸ್‌, ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ಮಾಹಿತಿ ಸಿಗಲಿದೆ ಎಂದು ವಿವರಿಸಿದರು.

ದೇಶದಲ್ಲಿ ಈರುಳ್ಳಿ ದರ ಹಲವು ನಗರಗಳಲ್ಲಿ ಕೆಜಿಗೆ 100 ರೂಪಾಯಿ ದಾಟಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರಕಾರ ಈ ಕ್ರಾಂತಿಕಾರಿ ತೀರ್ಮಾನ ತೆಗೆದುಕೊಂಡಿದೆ.

Comments are closed.