ನವದೆಹಲಿ: ಭಾರತದಲ್ಲಿ ಆ್ಯಪಲ್ ಐಫೋನ್ ಖರೀದಿಸುವ ಹಣದಲ್ಲೇ ದುಬೈಗೆ ಪ್ರಯಾಣಿಸಿ, ಐಫೋನ್ 12 ಅನ್ನು ಖರೀದಿಸಬಹುದು ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಹಿರಿಯ ಸಂಪಾದಕ ಸುರಜೀತ್ ದಾಸ್ ಗುಪ್ತಾ ಹೇಳಿದ್ದಾರೆ.
ನೀವು ಆ್ಯಪಲ್ ಐಫೋನ್ ಖರೀದಿಸಲು ಹತ್ತಿರ ಶೋ.ರೂಂ ಹುಡುಕಾಡುವ ಮುನ್ನ ಆಲೋಚಿಸಿ. ಏಕೆಂದರೆ ಅದಕ್ಕೆ ಪರ್ಯಾಯವಾಗಿ ವಾರಾಂತ್ಯದಲ್ಲಿ ಅದೇ ಹಣದಲ್ಲಿ ದುಬೈಗೆ ಪ್ರಯಾಣ ಬೆಳೆಸಬಹುದು (ಯಾವುದೇ ಕ್ವಾರಂಟೈನ್ ಇಲ್ಲದೆ). ಮಾತ್ರವಲ್ಲದೆ ಶಾಪಿಂಗ್ ತೆರಳಿ ನಗರದ ಸ್ವಾಂಕಿ ಮಾಲ್ನಲ್ಲಿ ಐಫೋನ್ 12 ಪ್ರೊ (250ಜಿಬಿ) ಖರೀದಿಸಬಹುದು ಎಂದು ಹೇಳಿದ್ದಾರೆ.
ಖುಷಿಯ ಸಂಗತಿಯೆಂದರೆ ಭಾರತದಲ್ಲಿ ಐಫೋನ್ 12 ಖರೀದಿಸುವ ಬದಲು ಐಫೋನ್ ಜೊತೆಗೆ ದುಬೈಗೆ ಹೋಗಿ ಬರಬಹುದಾಗಿದೆ.
ಇಷ್ಟೊಂದು ಬೆಲೆಯ ವ್ಯತ್ಯಾಸಕ್ಕೆ ಕಾರಣ ಸರಳವಾಗಿದೆ. ಸರ್ಕಾರ ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇ. 12ರಿಂದ 18ಕ್ಕೆ ಹೆಚ್ಚಿಸಿದೆ. ಅಷ್ಟು ಮಾತ್ರವಲ್ಲದೆ ಆಮದು ಮಾಡಿರುವ ಫೋನ್ಗಳ ಮೇಲೆ (ಬೇಸಿಕ್ ಕಸ್ಟಂ ಡ್ಯುಟಿ) ಶೇ20 ರಷ್ಟು ಪಾವತಿಸಬೇಕಿದೆ.
ಹಾಗಾಗಿ ಐಫೋನ್ 12 ಪ್ರೊ (256ಜಿಬಿ) ಭಾರತದಲ್ಲಿ 1,29,900 ರೂ.ಗೆ ಸಿಗುತ್ತದೆ. ಆದರೆ ದುಬೈನಲ್ಲಿ 96,732 ರೂ ಇದೆ. ಅಂದರೆ 33,168 ರೂ ವ್ಯತ್ಯಾಸವಿದೆ. ಇನ್ನು ಅಮೆರಿಕಾ ಬೆಲೆಗೆ ಹೊಂದಿಸಿದರೆ 42,000 ರೂ. ವ್ಯತ್ಯಾಸವಿದೆ ಎಂದಿದ್ದಾರೆ.
ದುಬೈನಲ್ಲಿ ಐಫೋನ್ 12 ಪ್ರೊ ಮತ್ತು ಮ್ಯಾಕ್ಸ್ ಬೆಲೆ ಭಾರತಕ್ಕಿಂತ 25 ಸಾವಿರ-35 ಸಾವಿರದವರೆಗೆ ಅಗ್ಗವಾಗಿದೆ. ಇನ್ನು ಅಮೆರಿಕಾಗೆ ಹೋಲಿಸಿದರೆ ಹೆಚ್ಚಿನ ವ್ಯತ್ಯಾಸವಿದೆ ಎಂದು ಸುರಜೀತ್ ದಾಸ್ ಗುಪ್ತಾ ಹೇಳಿದ್ದಾರೆ.