ರಾಷ್ಟ್ರೀಯ

ಕೋವಿಡ್ -19: ಗುಣಮುಖರಾದರೂ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು!

Pinterest LinkedIn Tumblr


ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಿದರೆ ಸೋಂಕು ಮರುಕಳಿಸಬಹುದು ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ.

ರೋಗ ನಿಯಂತ್ರಣ ಕೇಂದ್ರ (ಅಮೆರಿಕ) ದ ಪ್ರಕಾರ ಒಮ್ಮೆ ಕೊರೋನಾ ಸೋಂಕು ತಗುಲಿ ಆತ ಚೇತರಿಸಿಕೊಂಡ 90 ದಿನಗಳಲ್ಲಿ ಸೋಂಕು ಮರುಕಳಿಸುವ ಸಾಧ್ಯತೆ ಇದೆ, ಆದರೆ ಇದಕ್ಕೆ ಹಲವು ಅಧ್ಯಯನಗಳಲ್ಲಿ ಪ್ರತಿಕಾಯಗಳು 5 ತಿಂಗಳವರೆಗೆ ಇರಲಿದೆ ಎನ್ನುತ್ತಿವೆ.

ಆದರೆ ಇದು ಹೊಸ ರೋಗವಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಒಮ್ಮೆ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು, ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

Comments are closed.