
ನವದೆಹಲಿ: ಕಳೆದ ಮಾರ್ಚ್ ನಿಂದ ಪ್ರಾರಂಭವಾದ ಲಾಕ್ ಡೌನ್ ಸಮಯದಿಂದ ಇಲ್ಲಿಯವರೆಗೆ ಚಿನ್ನದ ಆಮದು ಬಾರಿ ಕುಸಿತ ಕಂಡಿದೆ.
ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ.57 ರಷ್ಟು, 6.8 ಬಿಲಿಯನ್ ಡಾಲರ್ (50,658 ಕೋಟಿ ರೂಪಾಯಿ) ಗಳಿಗೆ ಆಮದು ಇಳಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಚಿನ್ನದ ಆಮದು 15.8 ಬಿಲಿಯನ್ ( 1,10,259 ರೂಪಾಯಿಗಳಷ್ಟಿತ್ತು)
ಇದೇ ವೇಳೆ ಏಪ್ರಿಲ್-ಸೆಪ್ಟೆಂಬರ್ ಅವಧಿಯ ಬೆಳ್ಳಿ ಆಮದು ಸಹ ಶೇ.63.4 ರಷ್ಟು ಅಂದರೆ 733.57 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ( 5,543 ಕೋಟಿ ರೂಪಾಯಿಗಳಿಗೆ) ಇಳಿಕೆಯಾಗಿದೆ. ಚಿನ್ನ ಹಾಗೂ ಬೆಳ್ಳಿಯ ಆಮದು ಅಮೆರಿಕ- ಭಾರತದ ನಡುವೆ ಇದ್ದ ವ್ಯಾಪಾರದ ಕೊರತೆಯನ್ನು ಸರಿತೂಗಿಸಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Comments are closed.