ರಾಷ್ಟ್ರೀಯ

ಬೆನ್ನಿಗೆ ಚೂರಿ ಚುಚ್ಚಿದ ಗಾಯ…ಚುಚ್ಚಿದ್ದ ಚೂರಿ ಕೂಡಾ ಹಾಗೆಯೇ ಇತ್ತು… ರಕ್ತ ಸೋರುತ್ತಿತ್ತು… ಪೊಲೀಸ್ ವಿಚಾರಣೆಯಲ್ಲಿ ಆತ ಗಂಟೆಗಟ್ಟಲೆ ನಿಂತಿರಬೇಕಿತ್ತು..!

Pinterest LinkedIn Tumblr


ಜಬಲ್‌ಪುರ: . ಆತನ ಬೆನ್ನಿಗೆ ಚೂರಿ ಇರಿಯಲಾಗಿತ್ತು. ಗಂಭೀರ ಗಾಯವಾಗಿತ್ತು. ಆತನ ಬೆನ್ನಿಗೆ ಚುಚ್ಚಿದ್ದ ಚೂರಿ ಕೂಡಾ ಹಾಗೆಯೇ ಇತ್ತು. ರಕ್ತ ಸೋರುತ್ತಿತ್ತು.. ಪೊಲೀಸ್ ವಿಚಾರಣೆಯಲ್ಲಿ ಆತ ಗಂಟೆಗಟ್ಟಲೆ ನಿಂತಿರಬೇಕಿತ್ತು..!

ಏಕೆಂದರೆ, ಆತ ತನಗೆ ಚೂರಿ ಇರಿತವಾದ ಕೂಡಲೇ ಈ ಬಗ್ಗೆ ಪೊಲೀಸರ ಗಮನಕ್ಕೆ ತರಲು ನೇರವಾಗಿ ಠಾಣೆಗೆ ಹೋಗಿದ್ದ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ತನ್ನ ಸುತ್ತಲೂ ಪ್ಲಾಸ್ಟಿಕ್ ಪರದೆಯನ್ನು ಹಾಕಿಕೊಂಡಿದ್ದರು. ಬೆನ್ನಿನಲ್ಲಿ ರಕ್ತ ಸೋರುತ್ತಾ ಬಂದ ವ್ಯಕ್ತಿಯನ್ನು ಕಂಡ ಕೂಡಲೇ ಹಾಗೇ ನಿಲ್ಲಲು ಹೇಳಿದರು.

ಆತನ ಬೆನ್ನಿಗೆ ಚುಚ್ಚಿದ್ದ ಚೂರಿ ಹಾಗೆಯೇ ಇದ್ದರೂ ಕೂಡಾ ಆತನನ್ನು ಆಸ್ಪತ್ರೆಗೆ ದಾಖಲಿಸುವುದಿರಲಿ, ಪ್ರಥಮ ಚಿಕಿತ್ಸೆಯನ್ನೂ ನೀಡಲಿಲ್ಲ. ಬದಲಿಗೆ ಆತನನ್ನು ಗಂಟೆಗಟ್ಟಲೆ ನಿಲ್ಲಿಸಿ ವಿಚಾರಣೆ ನಡೆಸಿದರು..!

ಈ ಅಮಾನವೀಯ ಘಟನೆ ನಡೆದಿರೋದು ಮಧ್ಯ ಪ್ರದೇಶದ ಜಬಲ್‌ಪುರದಲ್ಲಿ. ಇಲ್ಲಿನ ಪೊಲೀಸರ ಅಮಾನವೀಯ ಕೃತ್ಯವನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ. ಪೊಲೀಸರ ವರ್ತನೆಗೆ ನೆಟ್ಟಿಗರು ಚಾಟಿ ಬೀಸಿದ್ದಾರೆ.

Comments are closed.