ರಾಷ್ಟ್ರೀಯ

ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಬಂದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ಹೈದರಾಬಾದ್: ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಬಂದ ಪದವಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ವರದಿಯಾಗಿದೆ.

ಜ್ಯೂಬಿಲಿ ಹಿಲ್ಸ್ ನಿವಾಸಿಯಾದ ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಮೂವರು ಯುವಕರ ಜೊತೆ ಕುಕಟಪಲ್ಲಿ ಹೋಟೆಲ್ ಗೆ ಹುಟ್ಟುಹಬ್ಬ ಆಚರಣೆಗೆ ತೆರಳಿದ್ದಳು. ಆಕೆಯ ಸ್ನೇಹಿತ ಎಂ.ಜೋಸೆಫ್ ಆಹ್ವಾನದ ಮೇರೆಗೆ ಪಾರ್ಟಿಗೆ ಹೋಗಿದ್ದಳು.

ಸಿಕಂದರಾಬಾದ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಗೆ ಮೂರು ತಿಂಗಳ ಹಿಂದೆ ಜೋಸೆಫ್ ಪರಿಚಯವಾಗಿದ್ದ, ಮೊದಲಿಗೆ ಸಂತ್ರಸ್ತೆ ಟ್ಯಾಂಕ್ ಬಂದ್ ರಸ್ತೆಗೆ ಹೋಗಿದ್ದಳು, ನಂತರ ಅಲ್ಲಿಂದ ಮೆಟ್ರೋ ಸ್ಟೇಷನ್ ಬಳಿಯಿರುವ ಹೋಟೆಲ್ ಗೆ ತೆರಳಿದ್ದಾರೆ.

ಹೋಟೆಲ್ ನಲ್ಲಿ ಆಕೆಗೆ ಮತ್ತು ಬರುವ ಔಷಧಿ ಬೆರೆಸಿದ್ದ ಕೇಕ್ ನೀಡಿದ್ದಾರೆ, ಆಕೆ ಪ್ರಜ್ಞೆ ತಪ್ಪಿದ ನಂತರ ಮೂವರು ಒಬ್ಬರ ನಂತರ ಒಬ್ಬರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಆಕೆಗೆ ಪ್ರಜ್ಞೆ ಬಂದ ನಂತರ ಮೂವರು ಆಕೆಗೆ ಬೆದರಿಕೆ ಹಾಕಿ ಮನೆಗೆ ಕಳುಹಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಆಕೆಯ ಆರೋಗ್ಯದಲ್ಲಿ ಬದಲಾವಣೆ ಉಂಟಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಳೆ, ನಂತರ ಹೋಟೆಲ್ ನಲ್ಲಿ ನಡೆದ ಘಟನೆ ಬಗ್ಗೆ ತಾಯಿ ಬಳಿ ತಿಳಿಸಿದ್ದಾಳೆ, ನಂತರ ಆಕೆಯ ಪೋಷಕರು ಜ್ಯುಬಿಲಿ ಹಿಲ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಕುಕಟಪಲ್ಲಿ ಠಾಣೆಗೆ ವರ್ಗಾವಣೆ ಮಾಡಲಾಯಿತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೋಸೆಫ್, ನವೀನ್ ಮತ್ತು ರಾಮು ಎಂಬುವರನ್ನು ಬಂಧಿಸಿದ್ದು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Comments are closed.