ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿಯವರ ಪ್ರಸಕ್ತ ವರ್ಷದ ಆಸ್ತಿ ಹೆಚ್ಚಳವಾಗಿದ್ದು ಹೇಗೆ ಗೊತ್ತಾ?

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಸಕ್ತ ವರ್ಷದ ಆಸ್ತಿ ಘೋಷಣೆ ಮಾಡಿದ್ದು, ಅವರ ಆಸ್ತಿಯಲ್ಲಿ ಹೆಚ್ಚಳವಾಗಿದೆ.

ಕಳೆದ ವರ್ಷ ಆಸ್ತಿ ಘೋಷಣೆ ಮಾಡಿದ್ದ ಅವರು, 2.85 ಕೋಟಿ ತಮ್ಮ ಬಳಿ ಇದೆ ಎಂದು ದಾಖಲೆ ಸಲ್ಲಿಸಿದ್ದರು. ಈ ಆಸ್ತಿಯಲ್ಲಿ ಈಗ ಏರಿಕೆ ಕಂಡು ಬಂದಿದೆ. ಅದು 36 ಲಕ್ಷದಷ್ಟು ಮಾತ್ರ. ಏಕನಾಮಿಕ್ಸ್​ ಟೈಮ್ಸ್​ ವರದಿ ಪ್ರಕಾರ, ಮೋದಿ ಆಸ್ತಿಯ ನಿವ್ವಳ ಮೌಲ್ಯ ಕಳೆದವರ್ಷದಷ್ಟೇ ಇದೆ. ಆದರೆ, ಅವರ ಉಳಿತಾಯ ಹೆಚ್ಚಿರುವುದರಿಂದ ಆಸ್ತಿಯಲ್ಲಿ ಕೊಂಚ ಏರಿಕೆಯಾಗಿದೆ. ಅದರಲ್ಲಿ ಅವರ ಬ್ಯಾಂಕ್​ ಉಳಿತಾಯ ಪ್ರಮುಖವಾಗಿದೆ. ಅವರ ಉಳಿತಾಯ ಖಾತೆ ಶೇ3.3ಲಕ್ಷ ಹೆಚ್ಚಿದೆ. ಇದರ ಜೊತೆಗೆ ಅವರ ಠೇವಣಿ ಮೌಲ್ಯ ಕಳೆದ ವರ್ಷಕ್ಕಿಂತ 33 ಲಕ್ಷ ಹೆಚ್ಚಾಗಿರುವುದು. ಅವರ ಆಸ್ತಿ ಏರಿಕೆಗೆ ಕಾರಣವಾಗಿದೆ.

ಈ ಹಿಂದೆ ಸಲ್ಲಿಸಿದ್ದ ತಮ್ಮ ಆಸ್ತಿಯನ್ನೇ ಈ ಬಾರಿ ಕೂಡ ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರ ಗುಜರಾತ್​ನಲ್ಲಿನ ಗಾಂಧಿನಗರದ ಮನೆ 1.1 ಕೋಟಿ ಮೌಲ್ಯ ಉಳ್ಳದಾಗಿದೆ. ಇದರ ಮಾಲೀಕತ್ವವನ್ನು ಪ್ರಧಾನಿ ಒಬ್ಬರೇ ಹೊಂದಿಲ್ಲ. ಇದು ಮೂವರ ಜಂಟಿ ಮಾಲೀಕತ್ವದ ಮನೆಯಾಗಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ ಇದರ ಮೇಲೆ ಶೇ 25ರಷ್ಟು ಸಮಪ್ರಮಾಣದ ಪಾಲನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಇನ್ನು ಹಲವು ಸಾಲಗಳನ್ನು ಕೂಡ ಪ್ರಧಾನಿ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಅವರು ಯಾವುದೇ ವಾಹನವನ್ನು ಸ್ವಂತಕ್ಕೆ ಹೊಂದಿಲ್ಲ. ಇವರ ಬಳಿ ನಾಲ್ಕು ಚಿನ್ನದ ಉಂಗುರವಿದೆ. 45 ಗ್ರಾಂನ ಈ ಬಂಗಾರದ ಮೌಲ್ಯ 1.5 ಲಕ್ಷವಾಗಿದೆ.

ಮೋದಿ ಕೈಯಲ್ಲಿ 31.450 ರೂ ಹಣವಿದ್ದು, ಗುಜರಾತ್​ನ ಗಾಂಧಿನಗರದ ಎನ್​ಎಸ್​ಸಿ ಬ್ರಾಂಚ್​ನಲ್ಲಿ 3.38.173 ರೂ ಉಳಿತಾಯ ಹೊಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

8 ಲಕ್ಷದ 43 ಸಾವಿರದ 124 ರೂಗಳಷ್ಟು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್​ಎಸ್​ಸಿ) ಅವರ ಬಳಿ ಇದೆ. ಇದರ ಜೊತೆಗೆ 1 ಲಕ್ಷ 50 ಸಾವಿರದ 957ರೂಗಳ ಜೀವ ವಿಮಾ ಪಾಲಿಸಿ ಇದ್ದು, 20 ಸಾವಿರ ಮೌಲ್ಯದ ತೆರಿಗೆ ಉಳಿತಾಯದ ಇನ್ಫ್ರಾ ಬಾಂಡ್​ ಹೊಂದಿದ್ದಾರೆ. ಇನ್ನು ಅವರ ಚರಾಸ್ತಿ 1.75 ಕೋಟಿ ಆಗಿದೆ.

ಅಮಿತ್​ ಶಾ ಆಸ್ತಿಯಲ್ಲಿ ಇಳಿಕೆಕೇಂದ್ರ ಗೃಹ ಸಚಿವ ಅಮಿತ್​ ಶಾ ಕಳೆದ ಬಾರಿ ಘೋಷಿಸಿದ ಆಸ್ತಿಗೆ ಹೋಲಿಕೆ ಮಾಡಿದರೆ, ಈ ಬಾರಿ ಆಸ್ತಿಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇದಕ್ಕೆ ಕಾರಣ ಅವರು ಹೊಂದಿರುವ ಷೇರುಗಳ ಕುಸಿತ.

ಕಳೆದ ವರ್ಷ 32.3 ಕೋಟಿ ಆಸ್ತಿ ಘೋಷಿಸಿದ್ದ ಶಾ ಈ ಬಾರಿ 28.6 ಕೋಟಿ ಆಸ್ತಿ ಒಡೆಯರಾಗಿರುವುದಾಗಿ ತಿಳಿಸಿದ್ದಾರೆ. ಅವರ ಭದ್ರತಾ ಮಾರುಕಟ್ಟೆ ಮೌಲ್ಯ ಕುಸಿತ ಇದಕ್ಕೆ ಕಾರಣವಾಗಿದೆ, ಶಾ ಹೆಂಡತಿ ಸೋನಲ್​ ಅಮಿತ್​ ಶಾ ಕೂಡ ಆಸ್ತಿ ಬಹಿರಂಗ ಪಡಿಸಿದ್ದು, ಅವರು ಆಸ್ತಿಯಲ್ಲಿಯೂ ಕೊಂಚ ಇಳಿಕೆ ಕಂಡು ಬಂದಿದೆ. 2019ರಲ್ಲಿ 9 ಕೋಟಿ ಒಡೆತಿಯಾಗಿದ್ದ ಅವರ ಬಳಿ ಈಗ 8-5 ಕೋಟಿ ಇದೆ.

ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಒಟ್ಟು ಆಸ್ತಿ ಕಳೆದ ಬಾರಿಯಷ್ಟೇ ಇದ್ದು, ಯಾವುದೇ ಏರಿಕೆ ಇಳಿಕೆ ಕಂಡುಬಂದಿಲ್ಲ.

Comments are closed.