ರಾಷ್ಟ್ರೀಯ

ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜಕಾರಣದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಧಿಕಾರದಲ್ಲಿ ಹೆಚ್ಚು ಕಾಳ ಉಳಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಇಂದು ಅಖಂಡ ಅಧಿಕಾರದಲ್ಲಿ 20ನೇ ವರ್ಷಕ್ಕೆ ನರೇಂದ್ರ ಮೋದಿ ಕಾಲಿಟ್ಟಿದ್ದಾರೆ. 07-10-2001ರಂದು ಗುಜರಾತ್ ಮುಖ್ಯಮಂತ್ರಿ ಆದ ನರೇಂದ್ರ ಮೋದಿ ಅಲ್ಲಿಂದೀಚೆ ಅಧಿಕಾರದಲ್ಲಿಯೇ ಮುಂದುವರಿದಿದ್ದಾರೆ.

ಸತತ ಗೆಲುವು, ಅದ್ಭುತ ಅಭಿವೃದ್ಧಿ ಕೆಲಸಗಳಿಂದ ದೇಶದ ಜನಮನಗೆದ್ದ ನರೇಂದ್ರ ಮೋದಿ, 2014 ರ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿಯೂ ಹೊರಹೊಮ್ಮಿದ್ರು. ಬಿಜೆಪಿಗೆ ಪರಾಕ್ರಮಿ ನಾಯಕತ್ವ ಕೊಟ್ಟ ಮೋದಿ, ಪ್ರಚಂಡ ಗೆಲುವನ್ನು ತಂದು ಕೊಟ್ರು. ಅಲ್ಲಿವರೆಗೆ, ಸ್ವತಂತ್ರ ಭಾರತದಲ್ಲಿ, ಕಾಂಗ್ರೆಸ್ಸೇತರ ಪಕ್ಷವೊಂದಕ್ಕೆ ಇಂತಹ ಐತಿಹಾಸಿಕ ಗೆಲುವು ಸಿಕ್ಕಿರಲಿಲ್ಲ. ಕಾಂಗ್ರೆಸ್ ಹೊರತುಪಡಿಸಿದರೆ ಏಕಾಂಗಿಯಾಗಿ ಬೇರೆ ಯಾವ ಪಕ್ಷವೂ ದಿಲ್ಲಿಯ ಗದ್ದುಗೆ ಏರಿರಲಿಲ್ಲ. ಗುಜರಾತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೋದಿ, ಅಂದೇ, ಪ್ರಧಾನಿಯಾಗಿಯೂ ಅಧಿಕಾರ ಸ್ವೀಕರಿಸಿದರು.

ಪ್ರಧಾನಿಯಾಗಿಯೂ ಹೊಸ ದಾಖಲೆ ನಿರ್ಮಿಸಿರೋ ಮೋದಿ, ಅತಿ ಸುದೀರ್ಘ ಕಾಲ ದೇಶವನ್ನಾಳಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಷ್ಟು ಸುದೀರ್ಘ ಅವಧಿಗೆ ಆಡಳಿತ ನಡೆಸಿರೋ ಏಕೈಕ ಬಿಜೆಪಿ ನಾಯಕರಾಗಿಯೂ ಮೋದಿ ಹೊರಹೊಮ್ಮಿದ್ದಾರೆ. ಸತತ 19 ವರ್ಷಗಳಿಂದ ಗುಜರಾತ್, ದೇಶಕ್ಕೆ ನೇತೃತ್ವ ನೀಡಿರೋ ಮೋದಿ, ಈಗ ಅಖಂಡ ಆಡಳಿತ 20ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಇಷ್ಟು ಸುದೀರ್ಘ ಅವಧಿಗೆ ನಾಯಕತ್ವ ನೀಡಿರೋ ದೇಶಗಳ ನಾಯಕರ ಪೈಕಿ ಮೋದಿಯೇ ಮೊದಲಿಗರಾಗಿದ್ದಾರೆ. ಅಮೆರಿಕಾ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಸತತ 20 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಫ್ರಾಂಕ್ಲಿನ್ ರೂಸ್​ವೆಲ್ಟ್​ 16 ವರ್ಷ ಸತತ ಅಧಿಕಾರದಲ್ಲಿದ್ದರು. ಮೋದಿಯವರ ಈ ಜಾಗತಿಕ ದಾಖಲೆಯನ್ನು ಸಧ್ಯಕ್ಕಂತೂ ಯಾರೂ ಮುರಿಯುವ ಲಕ್ಷಣಗಳಿಲ್ಲ. ಅಂದ ಹಾಗೆ ಭಾರತದಲ್ಲಿ ಜವಹರಲಾಲ್ ನೆಹರು 17 ವರ್ಷ, ಇಂದಿರಾ ಗಾಂಧಿ 11 ವರ್ಷ ನಿರಂತರ ಆಳ್ವಿಕೆ ನಡೆಸಿದ್ದರು. ಸಿಎಂಗಳ ಪೈಕಿ ಸಿಕ್ಕಿಂನ ಪಿ ಕೆ ಚಾಮ್ಲಿಂಗ್ 24 ವರ್ಷ, ಬಂಗಾಳದ ಜ್ಯೋತಿ ಬಸು 23 ವರ್ಷ, ಒಡಿಶಾದ ನವೀನ್ ಪಟ್ನಾಯಕ್ 20 ವರ್ಷ, ತ್ರಿಪುರದ ಮಾಣಿಕ್ ಸರ್ಕಾರ್ 19 ವರ್ಷ ನಿರಂತರ ಆಳ್ವಿಕೆ ನಡೆಸಿದ್ದಾರೆ. ಆದರೆ, ಇವರ್ಯಾರೂ ರಾಷ್ಟ್ರ ರಾಜಕಾರಣಕ್ಕೆ ತಲೆ ಹಾಕಲಿಲ್ಲ.

Comments are closed.