ರಾಷ್ಟ್ರೀಯ

ಅನೈತಿಕ ಸಂಬಂಧ ಕಣ್ಣಾರೆಕಂಡ ಮಗುವನ್ನೇ ಕೊಂದ ಹೆತ್ತ ತಾಯಿ ! ಅಷ್ಟಕ್ಕೂ ಮಗು ಮಾಡಿದ ತಪ್ಪೇನು ಗೊತ್ತೇ…?

Pinterest LinkedIn Tumblr

ಗಾಂಧಿನಗರ: ಪ್ರಿಯಕರನೊಂದಿಗೆ ತನ್ನ ಆ ತಾಯಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನ್ನು ಕಣ್ಣಾರೆ ಕಂಡ ಆರು ವರ್ಷದ ಮಗನನ್ನು ಆತನ ತಾಯಿ ಮತ್ತು ಪ್ರಿಯಕರ ಹತ್ಯೆ ಮಾಡಿದ ಘಟನೆಯೊಂದು ನಡೆದಿದೆ.

ಘಟನೆ ಗುಜರಾತ್‍ನ ಬನಾಸ್ ಕಾಂತಾ ಜಿಲ್ಲೆಯಲ್ಲಿ ನಡೆದಿದ್ದು, ಜಗದೀಶ್ ಠಾಕೋರ್ ಮೃತ ಬಾಲಕ. ಈತನ ತಾಯಿ ರಾಜುಲ್ ಮತ್ತು ತನ್ನ ಪ್ರಿಯಕರ ಸಂಜಯ್ ಠಾಕೋರ್ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಈಗಾಗಲೇ ಪೊಲೀಸರು ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಕೋವಿಡ್ ಟೆಸ್ಟ್‌ಗೆ ಒಳಪಡಿಸಿದ್ದಾರೆ.

ಆರೋಪಿ ರಾಜುಲ್ ಮತ್ತು ಸಂಜಯ್ ಠಾಕೋರ್ ಹೊಲದಲ್ಲಿ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ಆರು ವರ್ಷದ ಬಾಲಕ ನೋಡಿದ್ದಾನೆ. ಆಗ ತಮ್ಮ ಅಕ್ರಮ ಸಂಬಂಧದ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾರೆ. ಆದರೂ ಬಾಲಕ ಎಲ್ಲವನ್ನೂ ತಂದೆಗೆ ತಿಳಿಸಿದ್ದಾನೆ. ಮರುದಿನ ಬಾಲಕನನ್ನು ಅಪಹರಿಸಿ, ಕೊಲೆ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಬಾಲಕ ಜಗದೀಶ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗದೀಶ್ ತನ್ನ ತಾಯಿಯನ್ನು ಹೊಲದಲ್ಲಿ ಸಂಜಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗ ನೋಡಿದ್ದಾನೆ. ಆಗ ಸಂಜಯ್ ಇದನ್ನು ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು. ನನ್ನ ಹೆಂಡತಿ ಸಂಜಯ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಮೊದಲೆ ಅನುಮಾನಿಸಿದ್ದೆ ಎಂದು ಬಾಲಕನ ತಂದೆ ಲಲಿತ್ ಠಾಕೋರ್ ಹೇಳಿದ್ದಾರೆ.

ಬಾಲಕ ಜಗದೀಶ್ ನಾಪತ್ತೆಯಾದ ತಕ್ಷಣ ತಂದೆ ಲಲಿತ್ ಆತನನ್ನು ಹುಡುಕಾಡಿದ್ದಾರೆ. ಆಗ ಬಾಲ್ಸಾಸನ್ ರಸ್ತೆ ಬಳಿಯ ಹೊಲವೊಂದರಲ್ಲಿ ರಕ್ತದ ಮಡುವಿನಲ್ಲಿ ಜಗದೀಶ್ ಮೃತದೇಹ ಪತ್ತೆಯಾಗಿದೆ. ಕೂಡಲೇ ಲಲಿತ್ ಸಂತಾಲ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಆತನ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಜಯ್ ಮತ್ತು ರಾಜುಲ್ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್-19 ವರದಿಗಳು ಬಂದ ನಂತರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.