
ಹೊಸದಿಲ್ಲಿ: 2,000 ರೂ. ಮುಖಬೆಲೆಯ ನೋಟು ಮುದ್ರಣದ ಸ್ಥಗಿತಕ್ಕೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
2000 ರೂ. ನೋಟು ಮುದ್ರಣವನ್ನೇ ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿಲ್ಲ ಎಂದು ಲೋಕಸಭೆಗೆ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಲಾಕ್ ಡೌನ್ ವೇಳೆ ತಾತ್ಕಾಲಿಕವಾಗಿ ನೋಟುಗಳ ಮುದ್ರಣವನ್ನು ಆರ್ ಬಿಐ ಸ್ಥಗಿತಗೊಳಿಸಿತ್ತು. 2020ರ ಮಾರ್ಚ್ 31ರ ವೇಳೆಗೆ 2 ಸಾವಿರ ರೂ.ಗಳ 27,398 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಠಾಕೂರ್ ಹೇಳಿದರು.
ಈ ಮೂಲಕ ದೇಶಾದ್ಯಂತ 2000 ರೂಪಾಯಿ ನೋಟು ಸ್ಥಗಿತಗೊಳ್ಳುತ್ತಿದೆ ಎಂಬ ವದಂತಿಗಳಿಗೆ ಸರ್ಕಾರ ತೆರೆ ಎಳೆದಿದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದಿಂದ ಯಾವುದೇ ಸೂಚನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
Comments are closed.