ರಾಷ್ಟ್ರೀಯ

ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿತ ರಹಸ್ಯ ವಿಷಯಗಳನ್ನು ಚೀನಾಗೆ ರವಾನಿಸುತ್ತಿದ್ದ ದೇಶದ್ರೋಹಿ ಪತ್ರಕರ್ತನ ಬಂಧನ

Pinterest LinkedIn Tumblr

ನವದೆಹಲಿ: ದೇಶದ ರಹಸ್ಯ ವಿಷಯಗಳನ್ನು ಶತ್ರು ದೇಶ ಚೀನಾಕ್ಕೆ ನೀಡುತ್ತಿದ್ದ ದೇಶದ್ರೋಹಿ ಹವ್ಯಾಸಿ ಪತ್ರಕರ್ತನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಜೊತೆಗೆ ಈತನಿಗೇ ಸಹಕರಿಸಿದ ಮತ್ತಿಬ್ಬರನ್ನು ಕೂಡ ಬಂಧಿಸಿದ್ದಾರೆ.

ದೇಶದ ರಹಸ್ಯ ವಿಷಯಗಳನ್ನು ಚೀನಾಕ್ಕೆ ನೀಡುತ್ತಿದ್ದ ಹವ್ಯಾಸಿ ಪತ್ರಕರ್ತ ರಾಜೀವ್ ಶರ್ಮಾ ಎಂದು ಗುರುತಿಸಲಾಗಿದ್ದು, ಈತನಿಗೆ ಚೀನಾ ಮೂಲದ ಮಹಿಳೆ ಹಾಗು ಆಕೆಯ ಗೆಳೆಯ ನೇಪಾಳ ಮೂಲದ ವ್ಯಕ್ಯಿಯನ್ನು ದೆಹಲಿ ಪೊಲೀಸ್​ ವಿಶೇಷ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ.

ಚೈನೀಸ್​ ಸ್ಪೈ ಏಜೆನ್ಸಿ ಜತೆ ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿತ ಮಾಹಿತಿಗಳನ್ನು ಹಂಚಿಕೊಂಡಿದ್ದ ಫ್ರೀಲ್ಯಾನ್ಸ್​ ಪತ್ರಕರ್ತ ರಾಜೀವ್ ಶರ್ಮಾ. ಆತನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ ಪೊಲೀಸರು, ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಚೈನೀಸ್​ ಮಹಿಳೆ ಹಾಗೂ ಆಕೆಯ ನೇಪಾಳಿ ಸಂಗಾತಿಯನ್ನೂ ಶನಿವಾರ ವಶಪಡಿಸಿಕೊಂಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಚೀನೀ ಮಹಿಳೆ ಹಾಗೂ ಆಕೆಯ ಸಂಗಾತಿ ಇಬ್ಬರೂ ರಾಜೀವ್​ ಶರ್ಮಾಗೆ ದೊಡ್ಡ ಮೊತ್ತದ ಹಣ ನೀಡುತ್ತಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Comments are closed.