ರಾಷ್ಟ್ರೀಯ

ಲಡಾಖ್ ನಂತರ ಉತ್ತರಾಖಂಡ್ ನಲ್ಲಿ ಚೀನಾ ಕಟ್ಟಡ ನಿರ್ಮಾಣ

Pinterest LinkedIn Tumblr


ಉತ್ತರಾಖಂಡ್: ಈಶಾನ್ಯ ಲಡಾಖ್ ನ ಗಡಿ ಭಾಗದಲ್ಲಿ ಚೀನಾ ಕಟ್ಟಡ ನಿರ್ಮಾಣ ಚಟುವಟಿಕೆಗಳು ಬೆಳಕಿಗೆ ಬಂದ ಬೆನ್ನಲ್ಲೇ ಉತ್ತರಾಖಂಡ್ ಗೆ ಸೇರಿಕೊಂಡಂತೆ ಇರುವ ಗಡಿ ಭಾಗದಲ್ಲಿಯೂ ಚೀನಾ ಚಟುವಟಿಕೆಗಳು ಭರದಿಂದ ಸಾಗಿದೆ.

ನೇಪಾಳದ ಟಿಂಕರ್-ಲಿಪು ಪಾಸ್ ಗೆ ತೀರಾ ಹತ್ತಿರದಲ್ಲಿರುವ ಚೀನಾ ಭಾಗದಲ್ಲಿ ಗುಡಿಸಲು ತರಹದ ರಚನೆಗಳು ಕಂಡುಬಂದಿದೆ.

ಭಾರತೀಯ ಭದ್ರತಾ ಪಡೆಗಳು ಚೀನಾ ಲಿಬರೇಷನ್ ಸೇನೆಯ ಸಿಬ್ಬಂದಿಗಳ ಚಟುವಟಿಕೆಗಳ ಮೇಲೆ ಕಣ್ಣಿರಿಸಿವೆ.

ನೇಪಾಳ-ಭಾರತದ ಗಡಿಗೆ ಹೊಂದಿಕೊಂಡಂತೆ ಇರುವ ಲಿಪು ಲೇಖ್ ಬಳಿ ಚೀನಾದ ಸೇನಾ ಸಿಬ್ಬಂದಿ ನಿಯೋಜನೆ ಮಾಡಿದ್ದು 150 ಲೈಟ್ ಕಂಬೈನ್ಡ್ ಆರ್ಮ್ಸ್ ಬ್ರಿಗೇಡ್ ನ್ನು ನಿಯೋಜನೆ ಮಾಡಿದೆ.

Comments are closed.