ರಾಷ್ಟ್ರೀಯ

ಕದ#ನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಗುಂ#ಡಿನ ದಾ#ಳಿಯಲ್ಲಿ ಭಾರತೀಯ ಯೋಧ ಹು#ತಾತ್ಮ

Pinterest LinkedIn Tumblr

ಜಮ್ಮುಕಾಶ್ಮೀರ: ಗಡಿನಿಯಂತ್ರಣ ರೇಖೆಯ ಬಳಿ(ಎಲ್ಒಸಿ) ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿ ಗುಂ#ಡಿನ ದಾ#ಳಿ ನಡೆಸಿದ್ದು ಭಾರತೀಯ ಯೋಧರೊಬ್ಬರು ಹು#ತಾತ್ಮರಾಗಿದ್ದಾರೆ. ಘಟನೆಯಲ್ಲಿ ಅಧಿಕಾರಿಯೊಬ್ಬರು ಸೇರಿದಂತೆ ಇಬ್ಬರು ಗಂ#ಭೀರವಾಗಿ ಗಾ#ಯಗೊಂಡಿದ್ದಾರೆಂದು ವರದಿಯಾಗಿದೆ.

(ಸಾಂದರ್ಭಿಕ ಚಿತ್ರ)

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಮಂಗಳವಾರ ರಾತ್ರಿ ಗುಂ#ಡಿನ ದಾ#ಳಿ ನಡೆಸಿದೆ. ಮಂಗಳವಾರ ಮಧ್ಯಾಹ್ನ ಕೂಡ ಪಾಕಿಸ್ಥಾನ ಸೇನೆ ಸುಂದರ್ ಬಾನಿ ಸೆಕ್ಟರ್ ನ ಎಲ್ಓಸಿ ಉದ್ದಕ್ಕೂ ಶೆ#ಲ್ ದಾ#ಳಿ ಮತ್ತು ಗುಂ#ಡಿನ ದಾ#ಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರ ನೀಡಿದರೂ ಅಧಿಕಾರಿ ಸೇರಿದಂತೆ ಮೂವರು ಸೈನಿಕರು ಗಾ#ಯಗೊಂಡಿದ್ದರು. ಇದೀಗ ಗಾ#ಯಗೊಂಡ ಯೋಧರು ಮಿ#ಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ವರ್ಷದಲ್ಲಿ ಜಮ್ಮು ಪ್ರದೇಶದ ನಿಯಂತ್ರಣ ರೇಖೆಯಲ್ಲಿ 3,186 ಬಾರಿ ಕ#ದನ ವಿರಾಮ ಉ#ಲ್ಲಂಘನೆ ನಡೆದಿದೆ ಎಂದು ಕೇಂದ್ರ ಸೆಪ್ಟೆಂಬರ್ 14 ರಂದು ತಿಳಿಸಿತ್ತು.ಈ ವರ್ಷ (ಜನವರಿ 1 ರಿಂದ ಆಗಸ್ಟ್ 31 ರವರೆಗೆ) ಜಮ್ಮು ಪ್ರದೇಶದ ಇಂಡೋ-ಪಾಕ್ ಅಂತರರಾಷ್ಟ್ರೀಯ ಗಡಿಯಲ್ಲಿ 242 ಗಡಿಯಾಚೆಗಿನ ಗುಂ#ಡಿನ ದಾ#ಳಿಗಳು ಸಂಭವಿಸಿವೆ.

 

 

Comments are closed.