ದೆಹಲಿ: ಮೆಟ್ರೋ ಸೇವೆ ಪ್ರಾರಂಭವಾಯ್ತು ಅನ್ನೋ ಖುಷಿಯಲ್ಲಿದ್ದ ಮೆಟ್ರೋ ಪ್ರಯಾಣಿಕರಿಗೆ ಇದೀಗ ಸಮಸ್ಯೆಯೊಂದು ಪ್ರಾರಂಭವಾಗಿ ದೆ. ಮೆಟ್ರೋಗೆ ಬರುವ ಪ್ರಯಾಣಿಕರಲ್ಲಿ ಎಷ್ಟೋ ಮಂದಿಗೆ ಸ್ಮಾರ್ಟ್ ಫೋನ್ ಬಳಕೆ ಗೊತ್ತಿಲ್ಲ. ಇಂತವರು ಮೆಟ್ರೋ ಪ್ರಯಾಣದಿಂದ ದೂರ ಉಳಿಯಬೇಕಾಗಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಟೋಕನ್ ವ್ಯವಸ್ಥೆ ಇಲ್ಲ. ಸ್ಮಾರ್ಟ್‌ಕಾರ್ಡ್ ಇದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ಸೇವೆ ಆರಂಭವಾಗಿದೆ.
ಅಷ್ಟೆ ಅಲ್ಲ ಎಷ್ಟೋ ಜನ ರೀಚಾರ್ಜ್ ಮಾಡುವುದಕ್ಕೆ ಮೊಬೈಲ್ ಆಪ್ ಅಥವಾ ಸ್ಟೇಷನ್‌ನಲ್ಲಿ ಯುಪಿಐ ಪೇಮೆಂಟ್ ಮಾಡಬೇಕು. ಈ ಡಿಜಿಟಲ್ ವಿಧಾನ ಅನೇಕ ಜನರಿಗೆ ಗೊತ್ತಿಲ್ಲ. ಹೀಗಾಗಿ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂದುಕೊಂಡವರು ವಾಪಸ್ ಆಗುತ್ತಿದ್ದಾರೆ.
ಇನ್ನು ನೆಟ್‌ವರ್ಕ್, ತಾಂತ್ರಿಕ ಕಾರಣದಿಂದ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಸೇರಿದಂತೆ ಆನ್‌ಲೈನ್ ಟ್ರಾನ್ಸಾಕ್ಷನ್ ಕೂಡ ಕಷ್ಟವಾಗುತ್ತಿರೋದ್ರಿಂದ ಅನೇಕರು ಮೆಟ್ರೋ ನಿಲ್ದಾಣಕ್ಕೆ ಬಂದು ವಾಪಸ್ಸಾಗುತ್ತಿದ್ದಾರೆ.
Comments are closed.