ರಾಷ್ಟ್ರೀಯ

ನರ್ಸ್‌ನಿಂದ ಏಡವಟ್ಟು:ನವಜಾತ ಶಿಶು ಸಾವು

Pinterest LinkedIn Tumblr

ಮೀರತ್ : ವೈದ್ಯರ ಅನುಪಸ್ಥಿತಿಯಲ್ಲಿ ನರ್ಸ್ ಹೆರಿಗೆ ಮಾಡಿಸಿದರಿಂದ ನವಜಾತ ಶಿಶು ಸಾವನ್ನಪ್ಪಿದ್ದ ಘಟನೆ ಮೀರತ್ ಆಸ್ಪತ್ರೆಯಲ್ಲಿ ನಡೆದಿದ್ದು, ತನಿಖೆ ಶುರುವಾಗಿದೆ.

ನವಜಾತ ಶಿಶು ಸಾವನ್ನಪ್ಪಿದ ಮೇಲೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಚಿಕಿತ್ಸೆ ಹಣ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಪಟ್ಟು ಹಿಡಿದಿದ್ದರಂತೆ. ಮಹಿಳೆಯನ್ನು ಕಟ್ಟಿ ಹಾಕಿದ್ದರು ಎನ್ನಲಾಗಿದೆ. 20 ಸಾವಿರ ಮೊದಲು ಪಾವತಿಸುವಂತೆ ಸೂಚಿಸಿದ್ದರಂತೆ.

ಈ ಬಗ್ಗೆ ಮಹಿಳೆಯ ಪತಿ ದೂರು ನೀಡಿದ್ದಾನೆ. ಇದೊಂದು ಗಂಭೀರ ವಿಷ್ಯವಾಗಿದ್ದು, ತನಿಖೆ ನಡೆಯುತ್ತಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗೆ ನೊಟೀಸ್ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಬಾಗ್‌ಪತ್‌ನಲ್ಲಿ ಇಂತಹದ್ದೇ ಘಟನೆ ನಡೆದಿತ್ತು.

Comments are closed.