ರಾಷ್ಟ್ರೀಯ

ಫೇಸ್​ಬುಕ್​ ಗೆಳೆಯನಿಗೆ ಒಡವೆ ಕೊಟ್ಟ ಯುವತಿ ದುರಂತ ಸಾವು

Pinterest LinkedIn Tumblr


ಕಣ್ಣೂರು: ಕೆಲವೊಮ್ಮೆ ಜತೆಗಿದ್ದ ಫ್ರೆಂಡ್ಸ್​ಗಳನ್ನೇ ನಂಬಲು ಹಿಂದು-ಮುಂದು ನೋಡುವ ಕಾಲದಲ್ಲಿ ಫೇಸ್​ಬುಕ್​ ಮೂಲಕ ಪರಿಚಯವಾದವರನ್ನು ಯೋಚಿಸದೇ ನಂಬುವ ಮುನ್ನ ಒಮ್ಮೆ ಸ್ಟೋರಿ ಓದಿ.

ಬುಡಕಟ್ಟು ಜನಾಂಗದ ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬನನ್ನು ಕೇರಳದ ಕಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕೆಲಕಮ್​ ಪೆರುವಾ ನಿವಾಸಿ ಬಿಬಿನ್​ ಎಂದು ಗುರುತಿಸಲಾಗಿದ್ದು, ಕೆಲಕಮ್​ ಠಾಣಾ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಮಂಡಮ್​ಚೇರಿ ನಿವಾಸಿ ಶೋಭಾ ಮೃತದೇಹ ಆಗಸ್ಟ್​ 28 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಶವಪರೀಕ್ಷೆ ನಡೆಸಿದ ವೈದ್ಯರು ನೇಣಿಗೆ ಹಾಕಿದ್ದರಿಂದ ಯುವತಿ ಸಾವಿಗೀಡಾಗಿದ್ದಾಳೆಂದು ವರದಿ ನೀಡಿದರು. ಇದೇ ಸುಳಿವಿಟ್ಟುಕೊಂಡ ಪೊಲೀಸರು ಇದರಲ್ಲಿ ಬಿಬಿನ್​ ಕೈವಾಡ ಇದೆ ಎಂದು ಅನುಮಾನಗೊಂಡು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ಅಂದಹಾಗೆ ಬಿಬಿನ್​ ಫೇಸ್​ಬುಕ್​ ಮೂಲಕ ಶೋಭಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಆತನನ್ನು ತುಂಬಾ ನಂಬಿದ್ದ ಶೋಭಾ ತನ್ನ ಒಡವೆಗಳನ್ನೆಲ್ಲಾ ಅಡಮಾನ ಇಡಲು ಆತನಿಗೆ ನೀಡಿದ್ದಾಳೆ. ಆದರೆ, ಒಡವೆಗಳನ್ನು ಮರಳಿ ನೀಡಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

Comments are closed.