
ನವದೆಹಲಿ: ನಿಮ್ಮ ಖಾತೆಯನ್ನು ಮುಚ್ಚಿದರೆ ಅದಕ್ಕಾಗಿ ನಿಮಗೆ ಹಣ ಸಿಗುತ್ತದೆ ಎಂದು ಫೇಸ್‌ಬುಕ್(Facebook) ತನ್ನ ಬಳಕೆದಾರರಿಗೆ ತಿಳಿಸಿದೆ. ಇದು ಕೇಳಲು ವಿಚಿತ್ರವಾಗಿರಬೇಕು, ಆದರೆ ಇದು ನಿಜ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವವರಿಗೆ ಕಂಪನಿ ಹಣವನ್ನು ನೀಡುತ್ತದೆ.
ಕಾರಣ ಏನು?
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಹಿನ್ನೆಲೆ Facebook ಸಂಶೋಧನೆಯೊಂದನ್ನು ನಡೆಸುತ್ತಿದೆ. ಸಾಮಾಜಿಕ ಮಾಧ್ಯಮಗಳು ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತವೆಯೆ ಎಂಬುದನ್ನು ತಿಳಿದುಕೊಳ್ಳಲು ಕಂಪನಿ ಬಯಸುತ್ತಿದೆ. ಸ್ವತಂತ್ರವಾಗಿರುವ ಕೆಲ ಕಂಪನಿಗಳ ಜೊತೆಗೆ ಫೇಸ್ ಬುಕ್ ಈ ಕುರಿತು ಕರಾರು ಮಾಡಿಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಫೇಸ್ ಬುಕ್ ಅಧಿಕಾರು ಲಿಜ್ ಬೋರ್ಗಿಯೋಸ್ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಫೇಸ್ ಬುಕ್ ಯೋಜನೆ ಏನು?
ಸಾಮಾಜಿಕ ಮಾಧ್ಯಮ ಕಂಪನಿ ಫೇಸ್‌ಬುಕ್ ಪ್ರಸ್ತುತ ಈ ಸಂಶೋಧನೆಯಲ್ಲಿ ಅಮೆರಿಕದ ನಾಗರಿಕರನ್ನು ಮಾತ್ರ ಸೇರಿಸಲು ಬಯಸಿದೆ. ಕೆಲವು ದಿನಗಳವರೆಗೆ ನಿಷ್ಕ್ರಿಯಗೊಳ್ಳಲು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಅಮೆರಿಕನ್ ಬಳಕೆದಾರರನ್ನುಕಂಪನಿಗಳಿಗೆ ಕೇಳಿಕೊಂಡಿದೆ. ಸಂಶೋಧನೆ ಮುಗಿಯುವವರೆಗೂ ಈ ಬಳಕೆದಾರರು ಎರಡೂ ಪ್ಲಾಟ್‌ಫಾರ್ಮ್‌ಗಳಿಂದ ಹೊರಗುಳಿಯಬೇಕಾಗುತ್ತದೆ. ಯುಎಸ್ ಅಧ್ಯಕ್ಷೀಯ ಚುನಾವಣೆಯ ನಂತರ, ಅವರು ಮತ್ತೆ ತಮ್ಮ ಖಾತೆಯನ್ನು ಸಕ್ರಿಯಗೊಳಿಸಬಹುದು.
ಎಷ್ಟು ಹಣ ಸಿಗುತ್ತದೆ?
ಮಾಧ್ಯಮ ವರದಿಗಳ ಪ್ರಕಾರ, ಈ ಅವಧಿಯಲ್ಲಿ ಈ ಸಂಶೋಧನೆಯಲ್ಲಿ ಭಾಗಿಯಾಗಿರುವ ಜನರಿಗೆ ವಾರಕ್ಕೆ ಅನುಗುಣವಾಗಿ ಹಣವನ್ನು ನೀಡಲಾಗುವುದು. ನಿಷ್ಕ್ರಿಯಗೊಳಿಸಿದ್ದಕ್ಕಾಗಿ ಒಂದು ವಾರಕ್ಕೆ 10 ಡಾಲರ್ (ಸುಮಾರು 700 ರೂಪಾಯಿ) ನೀಡಲಾಗುವುದು. ಆದರೆ, ದೀರ್ಘಕಾಲೀನ ನಿಷ್ಕ್ರಿಯಗೊಂಡ ಬಳಕೆದಾರರಿಗೆ ವಾರಕ್ಕೆ $ 20 (ಸುಮಾರು 1500 ರೂಪಾಯಿ) ದರದಲ್ಲಿ ಪಾವತಿಸಲಾಗುವುದು ಎಂದು ಕಂಪನಿ ಹೇಳಿದೆ.
ಕಳೆದ ಬಾರಿಯ ಯುಎಸ್ ಅಧ್ಯಕ್ಷೀಯ ಚುನಾವಣೆಯ ವೇಳೆ ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಕಂಪನಿಯು ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಲಾಗಿತ್ತು ಫೇಸ್‌ಬುಕ್ ಬಳಕೆದಾರರ ಮೇಲೆ ಪ್ರಭಾವ ಬೀರಲು ಕಂಪನಿಯು ಹಲವಾರು ತಂತ್ರಗಳನ್ನು ಅಳವಡಿಸಿಕೊಂಡಿದೆ ಎಂದು ವಿವಿಧ ವರದಿಗಳಲ್ಲಿ ಹೇಳಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
Comments are closed.