ರಾಷ್ಟ್ರೀಯ

ನೋಟ್ ಪ್ರಿಂಟ್ ನ ನಾಸಿಕ್‌ ಘಟಕದ ಸಿಬ್ಬಂದಿಗೆ ಕರೊನಾ

Pinterest LinkedIn Tumblr


ನಾಸಿಕ್‌: ನೋಟು ಮುದ್ರಣ ಘಟಕಗಳಲ್ಲಿ ಒಂದಾಗಿರುವ ನಾಸಿಕ್‌ನ ಶಾಖೆಯಲ್ಲಿ 40 ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಘಟಕವನ್ನು ಸ್ಥಗಿತಗೊಳಿಸಲಾಗಿದೆ.

ನೋಟು ಮುದ್ರಣ ಘಟಕ ಮತ್ತು ಭಾರತೀಯ ಸೆಕ್ಯುರಿಟಿ ಪ್ರೆಸ್‌ (ಐಎಸ್‌ಪಿ)ಘಟಕದಲ್ಲಿ ಕಳೆದ ಎರಡು ವಾರಗಳಿಂದ 40 ಉದ್ಯೋಗಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಕಾರಣದಿಂದಾಗಿ ಮುಂಜಾಗರೂಕತಾ ಕ್ರಮವಾಗಿ ನಿನ್ನೆಯಿಂದ (ಸೋಮವಾರ) ಎರಡೂ ಘಟಕಗಳ ಕಾರ‍್ಯವನ್ನು ನಾಲ್ಕು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ನಾಲ್ಕು ದಿನಗಳು ಕಾರ್ಯ ನಿರ್ವಹಿಸದ ಕಾರಣದಿಂದಾಗಿ ಸುಮಾರು 6.8 ಕೋಟಿ ಕರೆನ್ಸಿ ನೋಟುಗಳ ಉತ್ಪಾದನಾ ನಷ್ಟ ಉಂಟಾಗಲಿದೆ. ಆದ್ದರಿಂದ ಇದನ್ನು ಸರಿದೂಗಿಸಲು ಮುಂದಿನ ಭಾನುವಾರದಂದೂ ಕಾರ್ಯನಿರ್ವಹಿಸುವ ಮೂಲಕ ಈ 4 ದಿನಗಳ ಕೆಲಸವನ್ನು ಸರಿದೂಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟಕಗಳು ಮತ್ತೆ ಕಾರಾರ‍ಯರಂಭಿಸಿದ ಬಳಿಕ ನಾಸಿಕ್‌ ಮುನ್ಸಿಪಲ್‌ ಕಾರ್ಪೋರೇಶನ್‌ ಎಲ್ಲ ಉದ್ಯೋಗಿಗಳಿಗೂ ಆ್ಯಂಟಿಜನ್‌ ಟೆಸ್ಟ್‌ ಕೈಗೊಳ್ಳಲಿದೆ. ನಂತರವಷ್ಟೇ ಸೋಂಕು ಇಲ್ಲದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ನೋಟು ಮುದ್ರಣ ಘಟಕ ಹಲವು ವಿಧದ ನೋಟುಗಳೂ ಸೇರಿ 17 ಲಕ್ಷ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತದೆ. ಜತೆಗೆ, ಸೆಕ್ಯುರಿಟಿ ಪ್ರೆಸ್‌ ರೆವಿನ್ಯು ಸ್ಟ್ಯಾಂಪ್‌ಗಳು, ಸ್ಟ್ಯಾಂಪ್‌ ಪೇಪರ್‌, ಪಾಸ್‌ಪೋರ್ಟ್‌ ಮತ್ತು ವೀಸಾಗಳನ್ನು ಮುದ್ರಿಸುತ್ತದೆ. ನೋಟು ಮುದ್ರಣ ಘಟಕದಲ್ಲಿ 2300 ಖಾಯಂ ಉದ್ಯೋಗಿಗಳು, ಸೆಕ್ಯುರಿಟಿ ಪ್ರೆಸ್‌ನಲ್ಲಿ 1700 ಕಾಯಂ ಉದ್ಯೋಗಿಗಳಿದ್ದಾರೆ.

Comments are closed.