ಅಂತರಾಷ್ಟ್ರೀಯ

ವಿದೇಶದಲ್ಲಿರುವ ಮಲ್ಯಗೆ ಸುಪ್ರೀಂ ಕೋರ್ಟ್​ನಲ್ಲಿ ಭಾರಿ ಹಿನ್ನಡೆ

Pinterest LinkedIn Tumblr


ನವದೆಹಲಿ: ಕೋಟ್ಯಂತರ ರೂಪಾಯಿ ಸಾಲ ಮರುಪಾವತಿಸದೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಸೋಮವಾರ ಭಾರಿ ಹಿನ್ನಡೆಯಾಗಿದೆ. 40 ದಶಲಕ್ಷ ಅಮೆರಿಕ ಡಾಲರ್​ ಅನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿ ನ್ಯಾಯಾಂಗ ನಿಂದನೆ ಎಸಗಿದ ಪ್ರಕರಣದಲ್ಲಿ ವಿಜಯ್ ಮಲ್ಯ ದೋಷಿ ಎಂಬ ತೀರ್ಪಿನ ಮರುಪರಿಶೀಲನೆಗೆ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ನ್ಯಾಯಪೀಠದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಕಳೆದ ವಾರ ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸಿತ್ತು.

ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ 2017ರ ಮೇ ತಿಂಗಳಲ್ಲಿ ನೀಡಿತ್ತು. ವಿಜಯ್ ಮಲ್ಯ ಅವರು ಕಿಂಗ್ ಫಿಶರ್​ ಏರ್​ಲೈನ್ಸ್ ಮೂಲಕ 9,000 ಕೋಟಿ ರೂಪಾಯಿಗೂ ಅಧಿಕ ಬ್ಯಾಂಕ್ ಸಾಲ ಪಡೆದುಕೊಂಡಿದ್ದರು. ಕಿಂಗ್ ಫಿಶರ್ ನಷ್ಟ ಅನುಭವಿಸಿದೆ ಎಂಬ ಕಾರಣ ಮುಂದಿಟ್ಟ ಮಲ್ಯ ಸಾಲ ಮರುಪಾವತಿಸಲು ಹಿಂದೇಟು ಹಾಕಿದ್ದರು. ಬಳಿಕ ಅವರು ಇಂಗ್ಲೆಂಡ್​ನಲ್ಲಿ ತಲೆಮರೆಸಿಕೊಂಡಿದ್ದಾರೆ. ಅಲ್ಲಿನ ಕೋರ್ಟ್​ನಲ್ಲೂ ಅವರ ಗಡಿಪಾರಿನ ಕೇಸ್ ನಡೆಯುತ್ತಿದೆ.

Comments are closed.